ಉಡುಪಿ: ಡಾ.ರಾಹುಲ್ ಕೊಟ್ಯಾನ್‌ಗೆ ಅಂತಾರಾಷ್ಟ್ರೀಯ ಪ್ರಶಸ್ತಿ
Update: 2017-02-19 16:50 IST
ಉಡುಪಿ, ಫೆ.19: ಇತ್ತೀಚೆಗೆ ಜಪಾನಿನ ಟೋಕಿಯೋ ನಗರದಲ್ಲಿ ಜರಗಿದ ಗ್ಲೋಬಲ್ ಇಸ್ಸ್ಯೂಸ್ ಇನ್ ಮಲ್ಟಿಡಿಸಿಪ್ಲಿನರಿ ರಿಸರ್ಚ್ ವಿಷಯದ ಕುರಿತ 3ನೆಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಣಿಪಾಲ ವಿವಿಯ ಸ್ಕೂಲ್ ಆಫ್ ಅಲೈಡ್ ಹೆಲ್ತ್‌ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ರಾಹುಲ್ ಕೋಟ್ಯಾನ್ ಮಂಡಿಸಿದ ಪ್ರಬಂಧಕ್ಕೆ ಉತ್ತಮ ಪ್ರಬಂಧ ಪ್ರಶಸ್ತಿ ಲಭಿಸಿದೆ.
ಅವರು 'ಎ ಡಿಫ್ಯೂಸನ್ ಟೆನ್ಸರ್ ಇಮೇಜಿಂಗ್ ಸ್ಟಡಿ ಟು ಎಸ್ಟಿಮೇಟ್ ನಾರ್ಮೇಟಿವ್ ಫ್ರಾಕ್ಷನಲ್ ಅನಿಸೋಟ್ರೋಪಿ ವ್ಯಾಲ್ಯೂಸ್ ಇನ್ ಡಿಫ ರೆಂಟ್ ಏಜ್ ಗ್ರೂಪ್ಸ್ ಆಫ್ ನಾರ್ಮಲ್ ಬ್ರೈನ್ ವೈಟ್ ಮ್ಯಾಟರ್' ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದರು.
ಇವರು 2013 ಮತ್ತು 2016ರಲ್ಲಿ ನಡೆದ ರಾಷ್ಟ್ರೀಯ ಅಧಿವೇಶನಗಳಲ್ಲಿ ಮಂಡಿಸಿದ ಪ್ರಬಂಧ ಗಳಿಗೂ ಪ್ರಶಸ್ತಿ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.