×
Ad

ಉಡುಪಿ: ದಿಲ್ಲಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಗೆ ಅಭಿನಂದನೆ

Update: 2017-02-19 16:56 IST

ಮೂಡುಬೆಳ್ಳೆ, ಫೆ.19:ದಿಲ್ಲಿಯಲ್ಲಿ ಜರಗಿದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ ಹಾಗೂ ಮೆಕ್ಸಿಕೋದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಮೂಡುಬೆಳ್ಳೆ ನೆಲ್ಲಿಕಟ್ಟೆ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿನಿ ಅಮೃತ ಪ್ರಸಾದ್‌ರವರನ್ನು ಇತ್ತೀಚೆಗೆ ಕಾಲೇಜಿನಲ್ಲಿ ಅಭಿನಂದಿಸಲಾಯಿತು.

ಅಮೃತ ಪ್ರಸಾದ್‌ರನ್ನು ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ, ಕಾಲೇಜಿನ ಸಂಚಾಲಕ ಹರೀಶ್ ಕುಮಾರ್ ಕರ್ಕೇರ ಅಭಿನಂದಿಸಿದರು. ಈ ಸಂದರ್ಭ ದಲ್ಲಿ ಅಮೃತ ಪ್ರಸಾದ್‌ರ ಪೋಷಕರಾದ ವಕೀಲ ಎಸ್.ಎಸ್.ಪ್ರಸಾದ್, ಶ್ರೀಮತಿ ಎಸ್.ಪ್ರಸಾದ್ ಉಪಸ್ಥಿತರಿದ್ದರು.

ಕಾಲೇಜಿನ ಅಧ್ಯಕ್ಷ ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಯು.ಎಲ್.ಭಟ್ ಸ್ವಾಗತಿಸಿದರು.

ಎನ್ನೆಸ್ಸೆಸ್ ಸಹ ಸಂಯೋಜನಾಧಿಕಾರಿ ಅಂಬಿಕಾ ರಾವ್ ಕಾರ್ಯಕ್ರಮ ನಿರೂ ಪಿಸಿದರು. ಘಟಕದ ಅಧಿಕಾರಿ ರಾಘು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News