×
Ad

ಮೂಡುಬಿದಿರೆ: ಮಾರಿಗುಡಿ ಪ್ರೆಂಡ್ಸ್‌ಗೆ ಎಂಪಿಎಲ್ ಟ್ರೋಫಿ

Update: 2017-02-19 17:20 IST

ಮೂಡುಬಿದಿರೆ, ಫೆ.19: ಮೂಡುಬಿದಿರೆ ಇಲೆವೆನ್ ಕ್ರಿಕೆಟರ್ಸ್‌ ವತಿಯಿಂದ ಸ್ವರಾಜ್ಯ ಮೈದಾನದಲ್ಲಿ 6 ದಿನಗಳ ಕಾಲ ನಡೆದ ಮೂಡುಬಿದಿರೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯ ಶನಿವಾರ ಕೊನೆಗೊಂಡಿದ್ದು, ಚಾಂಪಿಯನ್ ಆಗಿ ಮೂಡಿಬಂದ ಮಾರಿಗುಡಿ ಫ್ರೆಂಡ್ಸ್ 1.5ಲಕ್ಷ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಮಿಜಾರು ಕೂಲ್‌ಟೆಕ್ ತಂಡವು ರನ್ನರ್ಸ್‌ ಅಪ್ ಗಳಿಸಿದ್ದು 1 ಲಕ್ಷ ನಗದು ಹಾಗೂ ಟ್ರೋಫಿಯನ್ನು ಪಡೆದಿದೆ.

ಮಾರಿಗುಡಿ ಫ್ರೆಂಡ್ಸ್‌ನ ರಾಜೇಶ್ ಪಂದ್ಯಶ್ರೇಷ್ಠ ಹಾಗೂ ಸುಕುಮಾರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು, ಕೂಲ್‌ಟೆಕ್‌ನ ಅಶ್ವಿನ್ ಬೆಸ್ಟ್ ಬೌಲರ್ ಹಾಗೂ ಮೂಡುಬಿದಿರೆ ಎಂಎಸ್‌ಸಿ ತಂಡದ ಹರ್ಷದ್ ಬೆಸ್ಟ್ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ರವಿವಾರ ರಾತ್ರಿ ನಡೆದ ಸಮಾರೋಪ ಸಮಾರಭದಲ್ಲಿ ಶಾಸಕ ಅಭಯಚಂದ್ರ ಜೈನ್, ಸಂಸದ ನಳೀನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ, ಸೊರಬದ ಶಾಸಕ ಮಧು ಬಂಗಾರಪ್ಪ, ಮೂಡಿಗೆರೆ ಶಾಸಕ ಪಿ.ಬಿ. ನಿಂಗಯ್ಯ, ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್, ಸುದರ್ಶನ್ ಎಂ., ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮೂಲ್ಕಿ ಮೂಡುಬಿದಿರೆ ಜೆಡಿಎಸ್ ಅಧ್ಯಕ್ಷ ಅಶ್ವಿನ್ ಪಿರೇರಾ, ಅದಾನಿ ಯುಪಿಸಿಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಆಳ್ವ, ಯುವ ಜನತಾದಳದ ಜಿಲ್ಲಾಧ್ಯಕ್ಷ ರಕ್ಷಿತ್ ಸುವರ್ಣ, ಉದ್ಯಮಿಗಳಾದ ದೇವಿಪ್ರಸಾದ್ ಶೆಟ್ಟಿ, ಅಬುಲಾಲ ಪುತ್ತಿಗೆ, ಕೊಡ್ಯಡ್ಕ ಶೇಷಗಿರಿ ಹೆಗ್ಡೆ, ಗಣೇಶ್ ಕಾಮತ್, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ರತ್ನಾಕರ ದೇವಾಡಿಗ, ಪ್ರಸಾದ್ ಭಂಡಾರಿ ಮತ್ತಿತರರು ಭಾಗವಹಿಸಿದರು.

ಮೂಡುಬಿದಿರೆ ಇಲೆವೆನ್ ಕ್ರಿಕೆಟರ್ಸ್‌ನ ಅಧ್ಯಕ್ಷ ಹರೀಶ್ ಸ್ವಾಗತಿಸಿದರು. ಗೋಡ್ವಿನ್ ವಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News