ಮಂಗಳೂರು: ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನಾಚರಣೆ
ಮಂಗಳೂರು, ಫೆ.19: ಎಸ್ಕೆಎಸ್ಸೆಸ್ಸೆಫ್ ತನ್ನ 27ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಇಂದು ಕಾಂಜಿಲಕೊಡಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಮಾಅತ್ ಅಧ್ಯಕ್ಷ ಅಹ್ಮದ್ ಬಾವ ಕಾಂಜಿಲಕೊಡಿ ಅವರ ಅಧ್ಯಕ್ಷತೆಯಲ್ಲಿ ಗುರುಪುರ ರೇಂಜ್ ಜಂಇಯತುಲ್ ಮುಅಲ್ಲಿಮೀನ್‌ನ ಕೋಶಾಧಿಕಾರಿ ಎಂ.ಎ. ಆದಂ ಉಸ್ತಾದ್ ಧ್ವಜಾರೋಹಣವನ್ನು ನೆರವೇರಿಸಿದರು.
ಕಾಂಜಿಲಕೊಡಿ ಮಾಜಿ ಅಧ್ಯಕ್ಷ ಹಸನಬ್ಬ ನೂಯಿ, ಕೋಶಾಧಿಕಾರಿ ಎ.ಕೆ.ಹಾರಿಸ್, ಖತೀಬ್ ಉಸ್ತಾದ್ ಮುಹಿದ್ದೀನ್ ಸಅದಿ, ಸಿದ್ಧೀಕ್ ದಾರಿಮಿ ಅಸೈಗೋಳಿ, ಸಿದ್ಧೀಕ್ ದಾರಿಮಿ ಕಿನ್ಯ, ಉಸ್ಮಾನ್ ಮುಸ್ಲಿಯಾರ್ ಕಾಂಜಿಲಕೊಡಿ, ಎಸ್ಕೆಎಸ್ಸೆಸ್ಸೆಫ್ ವಲಯ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾಸ್ಟರ್, ಅಬ್ದುಲ್ ಜಬ್ಬಾರ್ ಪನೊಲಿಪಾದೆ, ಶರೀಫ್ ಪೊನ್ನೆಲ, ಶಾಫಿ ಕಳಸಗುರಿ, ಅಬ್ದುಲ್ ಅಝೀಝ್, ನೌಫಲ್ ಕೊಡಿಬೆಟ್ಟು, ಪುತ್ತುಮೋನು, ತೌಸೀಫ್, ರಶೀದ್ ಜುಬೈಲ್, ಮದ್ರಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅಡ್ಡೂರು ಕ್ಲಷ್ಟರ್ ಅಧ್ಯಕ್ಷ ಹಾರಿಸ್ ಕಳಸಗುರಿ ಕಾರ್ಯಕ್ರಮ ನಿರೂಪಿಸಿದರು.