×
Ad

ಮಣಿಪಾಲ: ಚಿತ್ರಕಲಾ ಸ್ಪರ್ಧೆ

Update: 2017-02-19 20:27 IST

ಮಣಿಪಾಲ, ಫೆ.19: ಮಹಾ ಶಿವರಾತ್ರಿಯ ಪ್ರಯುಕ್ತ ಬ್ರಹ್ಮ ಕುಮಾರೀಸ್ ಮಣಿಪಾಲ ಶಾಖೆಯ ವತಿಯಿಂದ ಶಾಲಾ ಮಕ್ಕಳಿಗೆ ಉಡುಪಿ ತಾಲೂಕು ಮಟ್ಟದ ಶಿವಲಿಂಗ ಬಿಡಿಸುವ ಚಿತ್ರಕಲಾ ಸ್ಪರ್ಧೆಯನ್ನು ಮಣಿಪಾಲ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರವಿವಾರ ಏರ್ಪಡಿಸಲಾಗಿತ್ತು.

ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಮಾತನಾಡಿ, ಬಾಲ್ಯ ದಿಂದಲೇ ನಮಗೆ ಆಧ್ಯಾತ್ಮದ ಅರಿವು ಅವಶ್ಯಕ. ಮಕ್ಕಳು ಬೆಳೆಯುತ್ತ ತುಂಬಾ ಒತ್ತಡ ಹಾಗೂ ಸಮಸ್ಯೆಗೆ ಒಳಗಾಗುತ್ತಾರೆ. ಆದ್ದರಿಂದ ಅವರಲ್ಲಿ ಈ ಒಂದು ಅರಿವು ಮೂಡಿಸುವುದು ಅಗತ್ಯವಿದೆ. ತನಗಿಂತ ಮಿಗಿಲು ಪರಮಾತ್ಮನ ಶಕ್ತಿಯನ್ನು ಅರಿತುಕೊಳ್ಳಬೇಕಾಗಿದೆ. ಇಂತಹ ಕಾರ್ಯಕ್ರಮದಿಂದ ಜನರಿಗೆ ಆಧ್ಯಾತ್ಮದ ಅರಿವು ಮೂಡಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಪರೀಕ ಪ್ರಕೃತಿ ಚಿಕಿತ್ಸೆಯ ಡಾ.ಶಿವರಾಜ ಪಾಟೇಲ್, ಪ್ರಜಕ್ತ, ಕಲಾವಿದ ಹರೀಶ ಸಾಗಾ, ಬಿ.ಕೆ.ಸೌರಭ, ಬಿ.ಕೆ.ಸುಜಾತ ಮೊದಲಾ ದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News