×
Ad

ಗ್ರೀನ್‌ಕಾರ್ಡಿದ್ದವರಿಗೆ ಅಮೆರಿಕ ಪ್ರಯಾಣ ನಿಷೇಧ ಆದೇಶ ಅನ್ವಯವಲ್ಲ

Update: 2017-02-19 21:20 IST

ವಾಶಿಂಗ್ಟನ್,ಫೆ.19: ಟ್ರಂಪ್ ಆಡಳಿತವು ಇರಾನ್, ಇರಾಕ್, ಸಿರಿಯ ಸೇರಿದಂತೆ ಏಳು ದೇಶಗಳ ಪ್ರಜೆಗಳಿಗೆ ಜಾರಿಗೊಳಿಸಿರುವ ಅಮೆರಿಕ ಪ್ರವೇಶ ನಿಷೇಧವು ಈಗಾಗಲೇ ವಿಮಾನದ ಮೂಲಕ ದೇಶಕ್ಕೆ ಆಗಮಿಸುತ್ತಿರುವ ಪ್ರಯಾಣಿಕರಿಗೆ ಹಾಗೂ ಗ್ರೀನ್‌ಕಾರ್ಡ್ ಹೊಂದಿರುವವರಿಗೆ ಆನ್ವಯಿಸುವುದಿಲ್ಲವೆಂದು ಅಮೆರಿಕದ ಆಂತರಿಕ ಭದ್ರತೆ ಸಚಿವಾಲಯದ ಕಾರ್ಯದರ್ಶಿ ಜಾನ್ ಕೆಲ್ಲಿ ಶನಿವಾರ ತಿಳಿಸಿದ್ದಾರೆ.

‘‘ ಅಧ್ಯಕ್ಷರು ಈ ಮೊದಲು ಜಾರಿಗೊಳಿಸಲಾಗಿದ್ದ ಆದೇಶದ ಕಟ್ಟುನಿಟ್ಟಾದ ಆದರೆ ಸರಳೀಕೃತ ಆವೃತ್ತಿಯನ್ನು ಬಿಡುಗಡೆಗೊಳಿಸಲು ಚಿಂತಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ವಿಮಾನನಿಲ್ದಾಣಗಳಿಂದಲೇ ಇತರ ದೇಶಗಳಿಗೆ ಜನರನ್ನು ಹಿಂದಕ್ಕೆ ಕಳಿಸುವಂತಹ ಸನ್ನಿವೇಶ ಉದ್ಭವಿಸಲಾರದು’’ ಎಂದವರು ತಿಳಿಸಿದ್ದಾರೆ.ಕೆಲ್ಲಿ ಅವರು ಶನಿವಾರ ಮ್ಯೂನಿಕ್‌ನಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಮಾತನಾಡುತ್ತಿದ್ದರು.

ಈ ಮಧ್ಯೆ ನೂತನ ಪರಿಷ್ಕೃತ ಆದೇಶವು ಮಂಗಳವಾರದೊಳಗೆ ಪ್ರಕಟವಾಗುವ ಸಾಧ್ಯತೆಯಿದೆಯೆಂದು ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯು, ಆಂತರಿಕ ಭದ್ರತಾ ಇಲಾಖೆಯ ವಿಜ್ಞಾಪನಾ ಪತ್ರವನ್ನು ಉಲ್ಲೇಖಿಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News