×
Ad

ಕಿಮ್ ಹತ್ಯೆ ಉ.ಕೊರಿಯದ ಕೃತ್ಯ : ದ.ಕೊರಿಯ ಆರೋಪ

Update: 2017-02-19 21:51 IST

ಸೋಲ್,ಫೆ.19: ಉತ್ತರ ಕೊರಿಯದ ನಾಯಕ ಕಿಮ್‌ಜೊಂಗ್ ಉನ್ ಅವರ ಮಲಸಹೋದರನ ಹತ್ಯೆಯ ಹಿಂದೆ ಉತ್ತರ ಕೊರಿಯ ಸರಕಾರದ ಕೈವಾಡವಿದೆಯೆಂಬುದನ್ನು ದಕ್ಷಿಣ ಕೊರಿಯದ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಕಿಮ್‌ಜೊಂಗ್ ನಾಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಮಲೇಶ್ಯ ಪೊಲೀಸರು ಉತ್ತರ ಕೊರಿಯದ ಓರ್ವ ಶಂಕಿತ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಕಳೆದ ಸೋಮವಾರ ಮಲೇಶ್ಯದಿಂದ ನಿರ್ಗಮಿಸಿದ್ದರೆನ್ನಲಾದ ಉತ್ತರ ಕೊರಿಯದ ಇನ್ನೂ ನಾಲ್ವರು ಪ್ರಜೆಗಳಿಗಾಗಿ ಅವರು ಹುಡುಕಾಡುತ್ತಿದ್ದಾರೆ.

‘‘ ಮೃತ ವ್ಯಕ್ತಿಯು ಕಿಮ್ ಜೊಂಗ್ ನಾಮ್ ಎಂದು ದೃಢಪಟ್ಟಿದೆ. ಅವರ ಕೊಲೆ ಪ್ರಕರಣದಲ್ಲಿ ಉತ್ತರ ಕೊರಿಯದ ನಾಲ್ವರು ಪ್ರಜೆಗಳು ಶಾಮೀಲಾಗಿರುವುದನ್ನು ಪರಿಗಣನೆಗೆ ತೆಗೆದುಕೊಂಡಾಗ, ಈ ಘಟನೆಯ ಹಿಂದೆ ಉತ್ತರ ಕೊರಿಯ ಸರಕಾರದ ಕೈವಾಡವಿದೆಯೆಂಬುದು ನಮ್ಮ ಅಭಿಪ್ರಾಯವಾಗಿದೆ’’ ಎಂದು ದ.ಕೊರಿಯ ಏಕಕೀಕರಣ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಕಳೆದ ಸೋಮವಾರ ಮಲೇಶ್ಯದ ಕೌಲಾಲಂಪುರದ ವಿಮಾನನಿಲ್ದಾಣದಲ್ಲಿ ವಿಷದ್ರಾವಣವನ್ನು ಸಿಂಪಡಿಸಿ ಕಿಮ್‌ಜಾಂಗ್ ನಾಮ್ ಅವರನ್ನು ಕೊಲೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News