ಮಂಗಳೂರು: ಎಸ್ಕೆಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆ
Update: 2017-02-19 23:16 IST
ಮಂಗಳೂರು, ಫೆ.19: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಹಾಗೂ ಸುನ್ನೀ ಸಂದೇಶ ಬಳಗದಿಂದ ಕಿಸಾ ಸಮಾರಂಭಗಣದಲ್ಲಿ ಎಸ್ಕೆಎಸ್ಸೆಸ್ಸೆಫ್ ಸ್ಥಾಪಕ ದಿನವನ್ನು ಆಚರಿಸಲಾಯಿತು.
ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ ಅಧ್ಯಕ್ಷತೆ ವಹಿಸಿದ್ದರು. ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಉದ್ಘಾಟಿಸಿದರು. ಹಾಜಿ ನೌಶಾದ್ ಸೂರಲ್ಪಾಡಿ ಧ್ವಜಾರೋಹಣ ಮಾಡಿದರು.
ಕೆ.ಎಂ ಸಿದ್ದೀಖ್ ಫೈಝಿ ಕರಾಯ 'ಎಸ್ಕೆಎಸ್ಸೆಸ್ಸೆಫ್ ನಡೆದು ಬಂದ ದಾರಿ' ಎಂಬುದರ ಕುರಿತು ವಿಷಯ ಮಂಡನೆ ನಡೆಸಿದರು. ಹಾಜಿ ಸಿತಾರ್ ಅಬ್ದುಲ್ ಮಜೀದ್ ಸ್ವಾಗತಿಸಿದ್ದು ಕೆ.ಐ ಮುಸ್ತಫಾ ಫೈಝಿ ದನ್ಯವಾದ ಸಮರ್ಪಿಸಿದರು.