ರೂಬಿಕ್ ಕ್ಯೂಬ್: ಗಿನ್ನಿಸ್ ದಾಖಲೆ ವೀರರಿಗೆ ಸನ್ಮಾನ
Update: 2017-02-19 23:47 IST
ಬೆಳ್ತಂಗಡಿ, ಫೆ.19: ರೂಬಿಕ್ ಕ್ಯೂಬ್‌ನಲ್ಲಿ ಅತ್ಯಂತ ದೊಡ್ಡದಾದ ಕಲಾಕೃತಿಯನ್ನು ರಚಿಸುವ ಮೂಲಕ ಗಿನ್ನಿಸ್ ದಾಖಲೆ ಸ್ಥಾಪಿಸಿರುವ ಉಜಿರೆಯ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪೃಥ್ವೀಶ್ ಹಾಗೂ ತಂಡವನ್ನು ಇಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸನ್ಮಾನಿಸಿದರು. ಬಳಿಕ ಮಾತನಾಡಿದ ಡಾ.ಹೆಗ್ಗಡೆ, ಗಿನ್ನಿಸ್ ದಾಖಲೆಗೆ ಬಳಸಿದ ಕ್ಯೂಬ್‌ಗಳನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕ್ಯೂಬ್ ಬಗ್ಗೆ ಕಲಿಸಿ ಅದನ್ನು ಹಂಚುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಹೆಮಾವತಿ ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ, ಉಜಿರೆ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಕೆ. ಸುರೇಶ್ ಹಾಗೂ ಪೃಥ್ವೀಶ್‌ರ ಪೋಷಕರು, ಉಪನ್ಯಾಸಕರು ಉಪಸ್ಥಿತರಿದ್ದರು.