×
Ad

ಸೈಂಟ್ ಜೋಸ್ಫ್ ಕಾಲೇಜಿನಲ್ಲಿ ಬಜೆಟ್ ಕುರಿತು ಸಂವಾದ ಗೋಷ್ಠಿ

Update: 2017-02-19 23:48 IST

    

 ಮಂಗಳೂರು, ೆ.19: ವಾಮಂಜೂರಿನ ಸೈಂಟ್ ಜೋಸ್ೆ ಇಂಜಿನಿಯರಿಂಗ್ ಕಾಲೇಜಿನಲ್ಲಿ 2017ರ ಕೇಂದ್ರ ಬಜೆಟ್ ಬಗ್ಗೆ ಕಾಲೇಜಿನ ವ್ಯವಹಾರ ಆಡಳಿತ ಮತ್ತು ಕಾಲೇಜಿನ ಮಾಧ್ಯಮ ಪ್ರಚಾರ ಸಮಿತಿಯ ವತಿಯಿಂದ ‘ಪ್ರುಡೆನ್ಸ್-2017’ ಸಂವಾದ ಗೋಷ್ಠಿ ಇತ್ತೀಚೆಗೆ ನಡೆಯಿತು. ಮಂಗಳೂರು ವಿವಿ ಪ್ರೊೆಸರ್ ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂವಾದ ಗೋಷ್ಠಿಯಲ್ಲಿ ಬ್ಯಾಂಕ್ ಆ್ ಮಹಾರಾಷ್ಟ್ರದ ಮಾಜಿ ಸಿಎಂಡಿ ಅಲೆನ್ ಪಿರೇರಾ, ಆರ್ಥಿಕ ಸಲಹೆಗಾರ ನೋಬರ್ಟ್ ಎಸ್. ಶೆಣೈ, ಕೆನರಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಹೆನ್ರಿ ಸಿ.ಎ್. ಬ್ರಿಟ್ಟೊ, ಒಲಿಂಪಸ್ ರೆಫ್ರಿಜರೇಶನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಕಾರಿ ಸುಮಿತ್ ರಾವ್ ಮತ್ತಿತರರು ಸಂವಾದಕರಾಗಿ ಪಾಲ್ಗೊಂಡಿದ್ದರು.

  ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸೈಂಟ್ ಜೋಸ್ೆ ಇಂಜಿನಿ ಯರಿಂಗ್ ಕಾಲೇಜಿನ ನಿರ್ದೇಶಕ ವಂ.ಜೋಸ್ೆ ಲೋಬೊ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ನಿರ್ದೇಶಕ ವಂ.ರೋಹಿತ್ ಡಿಕೋಸ್ಟ, ಪ್ರಾಂಶುಪಾಲ ಡಾ.ಜೋಸ್ೆ ಗೊನ್ಸಾಲ್ವಿಸ್, ಉಪ ಪ್ರಾಂಶುಪಾಲ ಡಾ.ರಿಯೋ ಡಿಸೋಜ, ವಿದ್ಯಾರ್ಥಿ ಕ್ಷೇಮ ವಿಭಾಗದ ಡೀನ್ ವಿನ್ಸೆಂಟ್ ಕ್ರಾಸ್ತಾ, ವ್ಯವಹಾರ ಆಡಳಿತ ವಿಭಾಗದ ಡೀನ್ ಡಾ.ಪ್ರಕಾಶ್ ಪಿಂಟೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News