ಫೆ.23: ‘ಅಮರಾವತಿ’ ಕನ್ನಡ ಚಲನಚಿತ್ರ ಪ್ರದರ್ಶನ
Update: 2017-02-19 23:48 IST
ಉಡುಪಿ, ಫೆ.19: ಉಡುಪಿಯ ವಾಟ್ಸ್‌ಆ್ಯಪ್ ಓದುಗರು ಬಳಗದ ವತಿಯಿಂದ ಪೌರ ಕಾರ್ಮಿಕರ ಜೀವನ ಕತೆಯುಳ್ಳ ಬಿ.ಎಂ.ಗಿರಿರಾಜ್ ನಿರ್ದೇಶನದ ‘ಅಮರಾವತಿ’ ಕನ್ನಡ ಚಲನಚಿತ್ರ ಪ್ರದರ್ಶನವು ಉಡುಪಿಯ ಡಯಾನಾ ಚಿತ್ರಮಂದಿರದಲ್ಲಿ ಫೆ.23ರಂದು ಸಂಜೆ 4:30 ಹಾಗೂ 7:30ಕ್ಕೆ ನಡೆಯಲಿದೆ.
ಉಡುಪಿಯ ಪೌರಕಾರ್ಮಿಕರಿಗೆ ಉಚಿತ ಹಾಗೂ ವಿಶೇಷ ಆಹ್ವಾನವನ್ನು ನೀಡಲಾಗಿದೆ. ಟಿಕೆಟ್ ದರ 60ರೂ. ಮತ್ತು 50ರೂ. ಪ್ರದರ್ಶನದ ದಿನ ನಿರ್ದೇಶಕರು ಹಾಗೂ ನಟರನ್ನೊಳಗೊಂಡ ಅಮರಾವತಿ ಚಿತ್ರತಂಡ ಆಗಮಿಸಲಿದ್ದು, ಚಿತ್ರದ ನಂತರ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂವಾದದಲ್ಲಿ ಪೌರಕಾರ್ಮಿಕರೂ ಭಾಗವಹಿಸಲಿದ್ದು ತಮ್ಮ ಜೀವನ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ.