×
Ad

ಪಳನಿಸ್ವಾಮಿ ವಿಶ್ವಾಸಮತದ ರದ್ದತಿ ಕೋರಿ ಹೈಕೋರ್ಟ್‌ಗೆ ಡಿಎಂಕೆ ಮೊರೆ

Update: 2017-02-20 17:13 IST

ಚೆನ್ನೈ,ಫೆ.20: ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿಯವರು ಗೆದ್ದುಕೊಂಡಿ ರುವ ವಿಶ್ವಾಸಮತವನ್ನು ಪ್ರಶ್ನಿಸಿ ಪ್ರತಿಪಕ್ಷ ಡಿಎಂಕೆ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದೆ. ವಿಶ್ವಾಸಮತವನ್ನು ರದ್ದುಗೊಳಿಸುವಂತೆ ಕೋರಿ ಅದು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮಂಗಳವಾರ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ಶನಿವಾರ ಕೋಲಾಹಲದಿಂದ ಕೂಡಿದ್ದ ತಮಿಳುನಾಡು ವಿಧಾನಸಭೆಯಲ್ಲಿ ರಹಸ್ಯ ಮತದಾನಕ್ಕೆ ಆಗ್ರಹಿಸಿ ಹಿಂಸಾಚಾರಕ್ಕಿಳಿದಿದ್ದ ಡಿಎಂಕೆಯ 88 ಸದಸ್ಯರನ್ನು ಸ್ಪೀಕರ್ ಪಿ.ಧನಪಾಲ್ ಅವರು ಹೊರಗೆ ಹಾಕಿದ ಬಳಿಕ ಪಳನಿಸ್ವಾಮಿ ಅವರು 122-11 ಮತಗಳ ಅಂತರದಲ್ಲಿ ವಿಶ್ವಾಸಮತವನ್ನು ಗೆದ್ದುಕೊಂಡಿದ್ದರು.

ವಿಶ್ವಾಸಮತ ನಿರ್ಣಯವನ್ನು ಬೆಳಿಗ್ಗೆ ಒಂದು ಬಾರಿ ಮತ್ತು ಸದನದ ಎರಡು ಮುಂದೂಡಿಕೆಗಳ ಬಳಿಕ ಇನ್ನೊಂದು ಬಾರಿ...ಹೀಗೆ ಎರಡು ಸಲ ಮಂಡಿಸಲಾಗಿದ್ದರಿಂದ ವಿಶ್ವಾಸಮತವು ಅಕ್ರಮವಾಗಿದೆ ಎಂದು ಡಿಎಂಕೆ ಸದಸ್ಯರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News