ಮಂಗಳೂರು: ರಾಷ್ಟ್ರೀಯ ಕ್ಯಾನ್ಸರ್ ತಡೆಗಟ್ಟುವಿಕೆ ತಿಂಗಳ ಪ್ರಯುಕ್ತ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
ಮಂಗಳೂರು, ಫೆ.20:ರಾಷ್ಟ್ರೀಯ ಕ್ಯಾನ್ಸರ್ ತಡೆಗಟ್ಟುವಿಕೆ ತಿಂಗಳ ಪ್ರಯುಕ್ತ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮಂಗಳೂರು ಇವುಗಳ ಸಹಯೋಗದಲ್ಲಿ ಆರೋಗ್ಯ ಮತ್ತು ಸಮುದಾಯ ಕೆಲಸಗಾರರಿಗಾಗಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ರೋಶನಿ ನಿಲಯದಲ್ಲಿ ನಡೆಯಿತು.
ರೋಶನಿ ನಿಲಯದ ಉಪ ಪ್ರಾಂಶುಪಾಲ ಡಾ. ಜೆನಿಸ್ ಮೇರಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವೈಟ್ ಡವ್ಸ್ ಸಂಸ್ಥೆಯ ಸಂಸ್ಥಾಪಕಿ ಅಧ್ಯಕ್ಷೆ ಕೊರಿನ್ ರಸ್ಕಿನ್ಹಾ, ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಅತಿಥಿಗಳಾಗಿದ್ದರು.
ಎ.ಜೆ. ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ನೋವು ಮತ್ತು ಉಪಶಮನ ಆರೈಕೆಯ ತಜ್ಞ ಡಾ. ನವೀನ್ ಆರ್. ರೊಡ್ರಿಗಸ್ ಮತ್ತು ರೇಡಿಯೇಶನ್ ಅಂಕೋಲಾಜಿಸ್ಟ್ ಡಾ. ಕವಿತಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ರೋಶನಿ ನಿಲಯದ ವೈದ್ಯಕೀಯ ಮತ್ತು ಮನೋವೈದ್ಯಕೀಯ ಸೋಶೀಯಲ್ ವರ್ಕ್ಸ್ ವಿಭಾಗದ ಅಧ್ಯಕ್ಷ ಡಾ. ಮೀರಾ ಮೊಂತೆರೊ ಉಪಸ್ಥಿತರಿದ್ದರು.ವಿದ್ಯಾರ್ಥಿ ಸಂಚಾಲಕಿ ರಮ್ಯಾ ಬಿ. ಸ್ವಾಗತಿಸಿದರು. ಮರಿಯಾ ಶಾಂತಿ ವಂದಿಸಿದರು.