×
Ad

ಕಿನ್ಯ: ಎಸ್ಸೆಸ್ಸೆಫ್, ಎಸ್‌ವೈಎಸ್ ಪ್ರತಿನಿಧಿ ಸಮಾವೇಶ

Update: 2017-02-20 17:28 IST

ಉಳ್ಳಾಲ, ಫೆ.20: ಸಂಘಟನಾತ್ಮಕವಾಗಿ ಒಗ್ಗೂಡುವುದರಿಂದ ಮಾತ್ರ ಅಭಿವೃದ್ಧಿ ಸಾಧ್ಯ. ನೇತೃತ್ವವನ್ನು ಅಂಗೀಕರಿಸದೇ ಸಂಘಟನಾ ಕಾರ್ಯ ಸಾಧ್ಯವಿಲ್ಲ ಎಂದು ಮೂಸ ಸಖಾಫಿ ಕಳತ್ತೂರು ಹೇಳಿದರು.

ಅವರು ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಇದರ ಆಶ್ರಯದಲ್ಲಿ ‘ಸಂಘ ಬದುಕಿನ ಆಧ್ಯಾತ್ಮಿಕತೆ' ಎಂಬ ವಿಚಾರವಾಗಿ ಕಿನ್ಯ ಬುಖಾರಿ ಜುಮಾ ಮಸೀದಿಯಲ್ಲಿ ರವಿವಾರ ನಡೆದ ಪ್ರತಿನಿಧಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಧಾರ್ಮಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕಾದರೆ ಜನರ ನಡುವೆ ಆಸಕ್ತಿಯಿಂದ ಪ್ರವೇಶಿಸಿ ಕಾರ್ಯ ನಿರ್ವಹಿಸಬೇಕು. ಅಭಿವೃದ್ಧಿಗೆ ಅಗತ್ಯವಾದ ಶಿಕ್ಷಣವನ್ನು ಒದಗಿಸುವ ಕಾರ್ಯ ನಾವು ಯಶಸ್ವಿಯಾಗಿ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಕೆ.ಸಿ.ನಗರ ಮಸೀದಿ ಖತೀಬ್ ಹನೀಫ್ ಸಖಾಫಿ ಕಿನ್ಯ ಉದ್ಘಾಟಿಸಿದರು. ಎಸ್‌ವೈಎಸ್ ಜಿಲ್ಲಾ ಉಪಾಧ್ಯಕ್ಷ ಮಹಮ್ಮದ್ ಅಲಿ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಯ್ಯದ್ ಆಲವಿ ತಂಙಳ್ ಕಿನ್ಯ ದುವಾ ನೆರವೇರಿಸಿದರು. ಎಚ್. ಎಚ್. ಉಂಞಿ ಹಾಜಿ, ಏಷಿಯನ್ ಬಾವಾ ಹಾಜಿ, ದೇರಳಕಟ್ಟೆ, ದ.ಕ. ಜಿಲ್ಲಾ ಎಸ್‌ವೈಎಸ್ ಕೋಶಾಧಿಕಾರಿ ಕತ್ತರ್ ಬಾವಾ ಹಾಜಿ ಸಯ್ಯದ್ ಜಲಾಲ್ ತಂಙಳ್ ಉಳ್ಳಾಲ, ಮಹಮ್ಮದ್ ಹಾಜಿ ಕಂಡಿಕ, ಎನ್‌ಎಸ್ ಉಮ್ಮರ್ ಮಾಸ್ಟ್ರ್ ಕೆಸಿರೋಡ್, ಫಾರೂಕ್ ತಲಪಾಡಿ, ಬುಖಾರಿ ಮಸೀದಿ ಕಾರ್ಯದರ್ಶಿ ಅಬ್ಬಾಸ್ ನಾಟೆಕಲ್ ಮೊದಲಾದವರು ಉಪಸ್ಥಿತರಿದ್ದರು.

ಕೆ.ಎಚ್ ಇಸ್ಮಾಯಿಲ್ ಸಅದಿ ಕಿನ್ಯ ಅತಿಥಿಗಳನ್ನು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News