×
Ad

ಐವರ್ನಾಡು ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ

Update: 2017-02-20 17:50 IST

ಮಂಗಳೂರು, ಫೆ.20: ಬೆಳ್ಳಾರೆಯ ಐವರ್ನಾಡು ಬಳಿ ನಡೆದ ದರೋಡೆ ಪ್ರಕರಣದ ಐವರು ಆರೋಪಿಗಳನ್ನು ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ಅವಿನಾಶ್ ಜಗನಾಥ ಮಾರ್ಕೆ , ಅಬ್ದುಲ್ ಕರೀಮ್, ಮೊಹಮ್ಮದ್ ಹನೀಫ್, ತಾಹಿರ ಹುಸೇನ್ , ಚರಣ್ ಸಿಂಗ್ ಎಂದು ಗುರುತಿಸಲಾಗಿದೆ.

ಜ.೧ರಂದು  ಅಬ್ದುಲ್ ಖಾದರ್ ಎಂಬವರ ಕಾರು ಅಡ್ಡಗಟ್ಟಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಐದು ಲಕ್ಷ ರೂ ನಗದು, ಮೊಬೈಲ್ ದೋಚಿದ್ದರು ಎನ್ನಲಾಗಿದೆ.

ಆರೋಪಿಗಳಿಗೆ ೧೫ ದಿನಗಳ ನ್ಯಾಯಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News