ಕಾವೂರು: ಪ್ರೌಢಶಾಲೆಯ ನವೀಕರಣ ಕಟ್ಟಡ ಉದ್ಘಾಟನೆ
Update: 2017-02-20 18:48 IST
ಮಂಗಳೂರು, ಫೆ.20: ಕ್ಯಾನ್‌ಪಿನ್ ಹೋಮ್ಸ್ ಲಿ. 10 ಲಕ್ಷ ರೂ.ವೆಚ್ಚದಲ್ಲಿ ನವೀಕರಣಗೊಂಡ ಕಾವೂರು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು.
ನವೀಕೃತ ಕಟ್ಟಡವನ್ನು ಕ್ಯಾನ್‌ಫಿನ್ ಹೋಮ್ ಲಿ.ನ ಪ್ರಬಂಧಕ ಉಮೇಶ್ ಪೈ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಲಯ ಶಿಕ್ಷಣಾಧಿಕಾರಿ ಮಂಜುಳಾ ಭಾಗವಹಿಸಿದ್ದರು.
ಕಾರ್ಪೋರೇಟರ್ ಮಧುಕಿರಣ್ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಗುತ್ತಿಗೆದಾರ ಸುಧೀರ್ ರಾಜ್, ಸುಮಂತ್ ರಾವ್ ,ಫೆಲ್ಸಿ ರೇಗೊ, ರಮಾನಂದ ಭಂಡಾರಿ, ಜಗದೀಶ್, ನಾಗೇಶ್ ನಾಯಕ್ ಮತ್ತಿತರು ಉಪಸ್ಥತಿರಿದ್ದರು.
ಮುಖ್ಯ ಶಿಕ್ಷಕ ಮಲ್ಲೇಶ್ ನಾಯ್ಕ್ ಎ.ಸಿ. ಸ್ವಾಗತಿಸಿದರು. ಸಹ ಶಿಕ್ಷಕ ನಾಗೇಶ್ ನಾಯಕ್ ವಂದಿಸಿದರು. ಸುಭಾಷಿಣಿ ಕಾರ್ಯಕ್ರಮ ನಿರೂಪಿಸಿದರು.