ಮಿತ್ತಬೈಲ್: ಎಸ್ಕೆಎಸ್ಸೆಸ್ಸೆಫ್ ಸ್ಥಾಪನ ದಿನಾಚರಣೆ
Update: 2017-02-20 18:54 IST
ಬಂಟ್ವಾಳ, ಫೆ. 20: ಎಸ್ಕೆಎಸ್ಸೆಸ್ಸೆಫ್ ಸ್ಥಾಪನ ದಿನದ ಪ್ರಯುಕ್ತ ಮಿತ್ತಬೈಲ್ ಕ್ಲಸ್ಟರ್ ವತಿಯಿಂದ ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರಗಿತು.
ಮಸೀದಿಯ ಮುದರ್ರಿಸ್ ಅಬ್ದುಲ್ ಹಮೀದ್ ದಾರಿಮಿ ಧ್ವಜಾರೋಹಣಗೈದು ದುಅ ನೆರವೇರಿಸಿದರು. ಸದರ್ ಉಸ್ತಾದ್ ಅಬ್ದುಲ್ ಹಮೀದ್ ದಾರಿಮಿ ಪ್ರಸ್ತವಿಕವಾಗಿ ಮಾತನಾಡಿದರು.
ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ಅಧ್ಯಕ್ಷ ಅಲ್ತಾಫ್, ಕಾರ್ಯದರ್ಶಿ ಶಾಕೀರ್ ಮಿತ್ತಬೈಲ್, ಅಬ್ದುಲ್ ಮಜೀದ್ ದಾರಿಮಿ ಪಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.