×
Ad

ಉಡುಪಿ: ವಿಜ್ಞಾನ -ಕಲಾ ವಸ್ತುಗಳ ಪ್ರದರ್ಶನ

Update: 2017-02-20 19:05 IST

ಉಡುಪಿ, ಫೆ.20: ಉದ್ಯಾವರ ಕೊರಂಗ್ರಪಾಡಿ ಎಂ.ಇ.ಟಿ ಆಂಗ್ಲ ಮಾಧ್ಯಮ ಶಾಲೆಯ ವಿಜ್ಞಾನ ಮತ್ತು ಕಲಾ ಸಂಘದ ವತಿಯಿಂದ ವಿಜ್ಞಾನ ಮತ್ತು ಕಲಾ ವಸ್ತುಗಳ ಬೃಹತ್ ಪ್ರದರ್ಶನವನ್ನು ಶನಿವಾರ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.

ಪ್ರದರ್ಶನವನ್ನು ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಜಲೀಲ್ ಮಾತನಾಡಿ, ವಿಜ್ಞಾನ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇಂದು ಪ್ರಪಂಚದಲ್ಲಿ ಆಗುವ ಅಭಿವೃದ್ಧಿಗೆ ವಿಜ್ಞಾನ ಪೂರಕ ವಾಗಿದೆ. ಆದುದರಿಂದ ಎಳೆಯ ಪ್ರಾಯದಲ್ಲಿಯೇ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕು. ಇದರಿಂದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹಾಗೂ ಸಂಶೋಧಿಸುವ ಸಾಮರ್ಥ್ಯ ಬೆಳೆಯುತ್ತದೆ ಎಂದು ಹೇಳಿದರು.

ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ದಿನೇಶ್‌ಕಿಣಿ, ಶಾಲಾ ಟ್ರಸ್ಟಿಗಳಾದ ಕಲಿಮುಲ್ಲಾ ತೋನ್ಸೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಸುಹೇಲ್, ಆಡಳಿತಾಧಿಕಾರಿ ಖಲೀಲ್ ಅಹಮ್ಮದ್ ಉಪಸ್ಥಿತರಿದ್ದರು.

 ಶಿಕ್ಷಕಿಯರಾದ ಸಬೀನಾ ಸ್ವಾಗತಿಸಿದರು. ರೀನಾ ವಂದಿಸಿದರು. ಪ್ರವಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಸಾವಿರಕ್ಕೂ ಮಿಕ್ಕಿ ಪೋಷಕರು ಹಾಗೂ ಸಾರ್ವಜನಿಕರು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News