×
Ad

ಸುಳ್ಯ: ದೊಣ್ಣೆಯಿಂದ ಹೊಡೆದು ಮಗನಿಂದಲೇ ತಂದೆಯ ಕೊಲೆ

Update: 2017-02-20 19:14 IST

ಸುಳ್ಯ, ಫೆ.20: ಬೆಳ್ಳಾರೆ ಠಾಣಾ ವ್ಯಾಪ್ತಿಯ ಪಾಟಾಜೆ ಎಂಬಲ್ಲಿ ಬಾಬು (55) ಎಂಬವರನ್ನು ಅವರ ಮಗ ಕುಮಾರ (24)ರವರು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.

ಮೃತರ ಅಣ್ಣ ಸುಂದರರವರು ಠಾಣೆಗೆ ನೀಡಿದ ದೂರಿನಲ್ಲಿ ಕುಡಿತದ ಚಟವಿದ್ದ ಕಾರಣದಿಂದ ಫೆ. 18ರಂದು ಮನೆಮಂದಿಯೊಂದಿಗೆ ಜಗಳವಾಗಿದೆ.

ಜಗಳ ವಿಕೋಪಕ್ಕೆ ಹೋಗಿ ಬಾಬುರವರ ಮೇಲೆ ಹಲ್ಲೆ ನಡೆದಿದೆ. ದೇಹಕ್ಕೆ ಬಲವಾದ ಹೊಡೆತ ಬಿದ್ದ ಕಾರಣ ಬಾಬುರವರು ಮೃತಪಟ್ಟರೆಂದು ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಕುಮಾರ್‌ನನ್ನು ಸೋಮವಾರ ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News