×
Ad

ಭಟ್ಕಳ: ಸರಕಾರಿ ಕಾಲೇಜಿಗೆ ಕಾಲಿಟ್ಟ ಕೇಸರಿ ಶಾಲು, ಉಪನ್ಯಾಸಕಿಯರಿಗೆ ಬುರ್ಖಾ ಧರಿಸದಂತೆ ಆಗ್ರಹ

Update: 2017-02-20 19:32 IST

ಭಟ್ಕಳ, ಫೆ.20: ಶಿವಮೊಗ್ಗ, ದ.ಕ. ಉಡುಪಿ ಜಿಲ್ಲೆಗಳ ನಂತರ ಈಗ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಲಿಟ್ಟಿರುವ ಕೇಸರಿ ಶಾಲು ಉಪನ್ಯಾಸಕಿಯರ ಬುರ್ಖಾ ನಿಷೇಧಿಸುವಂತೆ ಅಗ್ರಹ ವ್ಯಕ್ತಪಡಿಸಿದೆ.

ಸೋಮವಾರ ಕೇಸರಿ ಶಾಲನ್ನು ಧರಿಸಿ ಕಾಲೇಜ್ ಕ್ಯಾಂಪಸ್ ಪ್ರವೇಶಿಸಿದ ಸಂಘಪರಿವಾರದ ಸಂಘಟನೆಗಳ ವಿದ್ಯಾರ್ಥಿಗಳು ಇಲ್ಲಿನ ನಾಲ್ವರು ಮುಸ್ಲಿಮ್ ಉಪನ್ಯಾಸಕೀಯರು ಬುರ್ಖಾ ಧರಿಸಿ ಕಾಲೇಜು ಕ್ಯಾಂಪಸ್ ಪ್ರವೇಶಿಸಕೂಡದೆಂದು ಆಗ್ರಹಿದ್ದಾರೆ.

ಈ ಕುರಿತಂತೆ ಕಾಲೇಜಿನ ಪ್ರಾಂಶುಪಾಲೆ ಡಾ.ಭಾಗಿರತಿ ನಾಯ್ಕ ಮಾಧ್ಯಮದವರೊಂದಿಗೆ ಮಾತನಾಡಿ, ಪಕ್ಕದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬುರ್ಖಾ  ವಿರೋಧಿಸುತ್ತಿರುವ ಘಟನೆಯ ಪರಿಣಾಮ ನಮ್ಮಲ್ಲಿನ ಕೆಲ ವಿದ್ಯಾರ್ಥಿಗಳ ಮೇಲೆ ಬೀರಿದ್ದು, ಇಲ್ಲಿನ ನಾಲ್ಕು ಮುಸ್ಲಿಮ್ ಉಪನ್ಯಾಸಕಿಯರು ಬುರ್ಖಾ ಧರಿಸಿ ಪಾಠ ಮಾಡುತ್ತಾರೆ ಅವರಿಗೊಂದು ನ್ಯಾಯಾ ನಮಗೊಂದು ನ್ಯಾಯವೇ ಎಂದು ಪ್ರಶ್ನಿಸಿ ಕಳೆದ ಒಂದು ವಾರದ ಹಿಂದೆ  ಮನವಿ ಸಲ್ಲಿಸಿದ್ದರು. ಪ್ರಾಂಶುಪಾಲರು ಒಂದು ವಾರದ ಗಡುವು ನೀಡಿದ್ದು ಮೇಲಾಧಿಕಾರಿಗಳಿಗೆ ವಿಚಾರಿಸಿ ನಿರ್ಣಯಿಸಲಾಗುವುದು ಎಂದು ತಿಳಿಸಿದ್ದರು. ಈಗ ಆ ಗಡುವು ಮುಗಿದ ಕಾರಣ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸರಕಾರದ ಆದೇಶವಿಲ್ಲ:

ಸರಕಾರ ಉಪನ್ಯಾಸಕರಿಗೆ ಯಾವುದೇ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿಲ್ಲ. ಉಪನ್ಯಾಸಕರು ತಮ್ಮ ಇಷ್ಟದ ಉಡುಪನ್ನು ಧರಿಸಿ ಕಾಲೇಜಿಗೆ ಬರಹುದಾಗಿದ್ದು ಇದರಲ್ಲಿ ಯಾರದೇ ಅಡ್ಡಿಗಳಿಲ್ಲ ಎಂದು ತಿಳಿಸಿದ ಭಾಗಿರತಿ ಇಂದಿನ ಘಟನೆಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಮೇಲಾಧಿಕಾರಿಗಳಿಗೆ ವಿಷಯವನ್ನು ತಿಳಿಸಲಾಗಿದೆ ಎಂದರು.

ನಾವು ನಮ್ಮ ನಂಬಿಕೆಯ ಪ್ರಕಾರ ಬುರ್ಖಾ ಧರಿಸುತ್ತೇವೆ.  ಸರಕಾರ ನಮಗೆ ಯಾವುದೇ ವಸ್ತ್ರ ಸಂಹಿತೆಯನ್ನು ಅಳವಡಿಸುವಂತೆ ಆದೇಶಿಸಿಲ್ಲ ಎಂದು ಉಪನ್ಯಾಸಕಿಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News