ಬಂಟ್ವಾಳ: ಎಪಿಎಂಸಿ ಅಧ್ಯಕ್ಷರಾಗಿ ಪದ್ಮನಾಭ ರೈ ಆಯ್ಕೆ
Update: 2017-02-20 20:34 IST
ಬಂಟ್ವಾಳ, ಫೆ. 20: ನಿರೀಕ್ಷೆಯಂತೆ ನಾಮನಿರ್ದೇಶಿತ ಮೂವರು ಸದಸ್ಯರ ಬೆಂಬಲದೊಂದಿಗೆ ಬಂಟ್ವಾಳ ಎಪಿಎಂಸಿಯ ಪ್ರಥಮ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಕೆ.ಪದ್ಮನಾಭ ರೈ, ಉಪಾಧ್ಯಕ್ಷರಾಗಿ ಚಂದ್ರಶೇಖರ ಪೂಜಾರಿ ಚುನಾಯಿತರಾಗಿದ್ದಾರೆ.
ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯನ್ನು ಬಂಟ್ವಾಳ ತಹಶೀಲ್ದಾರ್ ಕೆ.ಪುರಂದರ ಹೆಗ್ಡೆ ನಡೆಸಿದರು. ಎಪಿಎಂಸಿ ಕಾರ್ಯದರ್ಶಿ ಭಾರತಿ ಪಿ.ಎಸ್. ಹಾಗೂ ಬಂಟ್ವಾಳ ಚುನಾವಣಾ ಶಾಖೆಯ ಉಪತಹಶೀಲ್ದಾರ್ ಪರಮೇಶ್ವರ್ ನಾಯಕ್ ಆಯ್ಕೆ ಪ್ರಕ್ರಿಯೆಗೆ ಸಹಕರಿಸಿದರು.