×
Ad

30 ದಿನಗಳೊಳಗೆ ಗೂಂಡಾಗಳನ್ನು ಜೈಲಿಗೆ ಅಟ್ಟಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆದೇಶ

Update: 2017-02-20 21:03 IST

ಕಾಸರಗೋಡು, ಫೆ.20: ಗೂಂಡಾಗಳನ್ನು ಮಟ್ಟ ಹಾಕಲು  ಪೊಲೀಸ್ ಇಲಾಖೆ ಮುಂದಾಗಿದ್ದು,   30 ದಿನಗಳೊಳಗೆ ಗೂಂಡಾಗಳನ್ನು ಜೈಲಿಗೆ ಅಟ್ಟುವಂತೆ ಕೇರಳ ಮುಖ್ಯಮಂತ್ರಿ  ಪಿಣರಾಯಿ ವಿಜಯನ್  ಪೊಲೀಸ್  ಇಲಾಖೆಗೆ ಆದೇಶ ನೀಡಿದ್ದಾರೆ.

ಕೊಚ್ಚಿಯಲ್ಲಿ  ಬಹುಭಾಷಾ ನಟಿ ಯೋರ್ವಳನ್ನು ತಂಡವೊಂದು ಅಪಹರಿಸಿ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಎಚ್ಚೆತ್ತ ಸರಕಾರ ಇಂತಹ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಕಾಸರಗೋಡು ಜಿಲ್ಲೆಯಲ್ಲಿ 150 ರಷ್ಟು ಗೂಂಡಾಗಲಿದ್ದಾರೆ ಎಂದು ಅಂಕಿ ಅಂಶ ತಿಳಿಸುತ್ತಿದೆ. ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ 140 ರಷ್ಟು ರೌಡಿಗಳಿದ್ದಾರೆ.  1984 ರಿಂದ 2016 ರ  ಸೆಪ್ಟ೦ಬರ್  ತನಕದ  ಪ್ರಕರಣಗಳ ಮಾಹಿತಿ ಕಲೆ ಹಾಕಿ ಗೂಂಡಾ ಪಟ್ಟಿ ತಯಾರಿಸಲಾಗಿದೆ. ಈ ನಡುವೆ  ಇನ್ನೂ ೨೫  ಮಂದಿಯನ್ನು ಗೂಂಡಾ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಈಗಾಗಲೇ ಶಿಫಾರಸು ಮಾಡಲಾಗಿದೆ.

ಮೂರಕ್ಕಿಂತ ಅಧಿಕ ಪ್ರಕರಣ ಗಳಲ್ಲಿ ಶಾಮೀಲಾದವರು. ಸಾರ್ವಜನಿಕರಿಗೆ  ಭೀತಿ ಉಂಟುಮಾಡುವ  ವವರನ್ನು ಗೂಂಡಾ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇಂತವರನ್ನು  ಕೂಡಲೇ  ಹಾಜರು ಪಡಿಸಿ  ಜೈಲಿಗೆ ಕಳುಹಿಸುವಂತೆ ಆದೇಶದಲ್ಲಿ  ತಿಳಿಸಲಾಗಿದೆ. 

ಈ ಹಿಂದೆ ಥೋಮ್ಸನ್ ಜೋಸ್ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ  ಗೂಂಡಾಗಳ ಪಟ್ಟಿಯನ್ನು ತಯಾರಿಸಿದ್ದರು. ರೌಡಿಗಳ ಪಟ್ಟಿಯ  ಡೇಟಾ ಬ್ಯಾ೦ಕ್ ತಯಾರಿಸಿದ್ದರು.  ಈ ಡೇಟಾ ಬ್ಯಾ೦ಕ್ ನಲ್ಲಿ ಎಲ್ಲಾ ರೌಡಿಗಳ   ಮಾಹಿತಿ ಲಭಿಸುತ್ತಿದೆ.
ರೌಡಿಯ ಭಾವಚಿತ್ರ , ವಿಳಾಸ, ಹಿನ್ನಲೆ , ಬೆರಳಚ್ಚು ಸೇರಿದಂತೆ ಎಲ್ಲಾ  ಮಾಹಿತಿ ಇದರಲ್ಲಿದೆ. ಇದರಂತೆ ಇದೀಗ  ಬಂದಿರುವ ಆದೇಶದಂತೆ  ಈ ಪಟ್ಟಿಯಲ್ಲಿರುವವರನ್ನು  ತಿಂಗಳೊಳಗೆ ಜೈಲಿಗೆಗಟ್ಟಲು ಪೊಲೀಸ್ ಇಲಾಖೆ ಪೂರ್ವ ತಯಾರಿ ನಡೆಸುತ್ತಿದೆ.

ಮಂಜೇಶ್ವರ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ರೌಡಿಗಳ ಅಟ್ಟಹಾಸ ದಿಂದ ಜನ ಸಾಮಾನ್ಯರು ನೆಮ್ಮದಿ ಕಳೆದುಕೊಂಡಿದ್ದಾರೆ. ಹಲವು ಮಂದಿ  ಜೀವ ಭಯದಿಂದ  ಇವರ ಬಗ್ಗೆ ಪೊಲೀಸರಿಗೂ ದೂರು ನೀಡಲು ಹಿಂದೆ ಸರಿಯುತ್ತಿದ್ದಾರೆ.  ಕೃತ್ಯಗಳು ಹೊರ ಜಗತ್ತಿಗೆ ತಿಳಿಯುತ್ತಿಲ್ಲ .  ಬೆದರಿಸಿ  ಹಫ್ತಾ ವಸೂಲಿ   ಈ ಪರಿಸರಗಳಲ್ಲಿ ನಡೆಯುತ್ತಿದೆ.

ಪ್ರಮುಖವಾಗಿ ವರ್ತಕರನ್ನು ರೌಡಿಗಳು ಭೀತಿ ಉಂಟು ಮಾಡುತ್ತಿದ್ದಾರೆ.  ಮಂಜೇಶ್ವರ  ಠಾಣಾ ವ್ಯಾಪ್ತಿಯಲ್ಲಿ ಕಳೆದ ಐದಾರು ವರ್ಷಗಳಲ್ಲಿ ನಡೆದ ಕೊಲೆ ಗಳು , ರೌಡಿಗಳ ಅಟ್ಟಹಾಸವು ಎಲ್ಲರನ್ನು ದಂಗುಬಡಿಸುತ್ತಿದೆ. ರಾಜ್ಯದಲ್ಲಿ  ೨೦೧೦ ರಷ್ಟು ಗೂಂಡಾಗಳಿದ್ದು ,  ಇವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News