ಮಂಗಳೂರು: ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಶಸ್ತಿ ಪ್ರದಾನ ಸಮಾರಂಭ
ಮಂಗಳೂರು, ಫೆ.20: ಬರಕಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಪ್ರಥಮ ವರ್ಷದ 'ಬಿಐಎಸ್ ಪ್ರಶಸ್ತಿ' ಪ್ರದಾನ ಸಮಾರಂಭವು ಶನಿವಾರ ಶಾಲಾ ಆವರಣದಲ್ಲಿ ನಡೆಯಿತು.
ಸಮಾರಂಭದಲ್ಲಿ ಯುನಿಟಿ ಹೆಲ್ತ್ ಕಾಂಪೆಕ್ಸ್‌ನ ಅಧ್ಯಕ್ಷ ಡಾ.ಸಿ.ಪಿ.ಹಬೀಬ್ ರಹ್ಮಾನ್, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಬಂಟ್ವಾಳದ ಇಝ್ಝತುಲ್ ಇಸ್ಲಾಮ್ ಅನಾಥಾಲಯದ ಅಧ್ಯಕ್ಷ ಅಬ್ದುಲ್ ಹಮೀದ್ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಬಹುಮಾನಗಳನ್ನು ವಿತರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬರಕಾ ಇಂಟರ್ ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಬಜ್ಪೆ ಮಾತನಾಡಿ, ನಿಮ್ಮ ಮಕ್ಕಳಿಗಾಗಿ ಸಂಪತ್ತನ್ನು ಸಂಗ್ರಹಿಸಲು ಹೋಗಬೇಡಿ. ನಿಮ್ಮ ಮಕ್ಕಳೇ ನಿಮ್ಮ ಸಂಪತ್ತು ಎಂದು ಭಾವಿಸಿ ಎಂದು ಶುಭ ಹಾರೈಸಿದರು.
ಬಳಿಕ 180ಕ್ಕೂ ಅಧಿಕ ವಿದ್ಯಾರ್ಥಿಗಳು ವರ್ಣರಂಜಿತ ಉಡುಗೆ ತೊಡುಗೆಗಳೊಂದಿಗೆ ಸ್ಕಿಟ್, ಕರಾಟೆ ಹಾಗೂ ಇತರ ಕಾರ್ಯಕ್ರಮಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಶೇ.100 ಹಾಜರಾತಿ ದಾಖಲಿಸಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರಶಸ್ತಿ ಫಲಕ ನೀಡಿ ಅತಿಥಿಗಳು ಗೌರವಿಸಿದರು. ಸಾಲೇಹ್ ಅಬ್ದುಲ್ ಅಝೀಝ್ ಸ್ವಾಗತಿಸಿದರು.