×
Ad

ಮಟಪಾಡಿ: ಹಾಸ್ಟೆಲ್ ಕಟ್ಟಡ ಉದ್ಘಾಟನೆ

Update: 2017-02-20 21:43 IST

ಬ್ರಹ್ಮಾವರ, ಫೆ.20: ಮಟಪಾಡಿ ಗ್ರಾಮದ ನಂದಿಕೇಶ್ವರ ದೇವಸ್ಥಾನದ ಬಳಿ ವಿಜಯ ಸೇವಾ ಪ್ರತಿಷ್ಠಾನದ ವತಿಯಿಂದ ನಿರ್ಮಿಸಲಾದ ಆರ್ಥಿಕ ಅಶಕ್ತ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯ 'ವಿಜಯ ಬಾಲನಿಕೇತನ' ಕಟ್ಟಡವನ್ನು ರವಿವಾರ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.

ಬಡ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ಸಾರ್ವಜನಿಕರು ಇಂತಹ ಕೆಲಸಗಳಿಗೆ ಸಹಕಾರ ನೀಡಿದಂತೆ ತಾನೂ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು.

ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ನೀಲಾವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಬೈಕಾಡಿ ಸುಪ್ರಸಾದ ಶೆಟ್ಟಿ ಶುಭಕೋರಿದರು.

 ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ನರಸಿಂಹಮೂರ್ತಿ, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ತಾಪಂ ಸದಸ್ಯ ಸುಧೀರ್‌ಕುಮಾರ್ ಶೆಟ್ಟಿ, ವಾರಂಬಳ್ಳಿ ಗ್ರಾಪಂ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಉದ್ಯಮಿಗಳಾದ ಬೆಂಗಳೂರಿನ ರಾಜೇಂದ್ರ ಗಾಣಿಗ, ಉಡುಪಿಯ ದಿನೇಶ್ ಪುತ್ರನ್, ಬ್ರಹ್ಮಾವರದ ಕಿಶೋರ್‌ಬಾಯಿ ಪಟೇಲ್, ಲಕ್ಷ್ಮೀನಾರಾಯಣ ಪೈ, ಎಳ್ಳಂಪಳ್ಳಿ ಉಮೇಶ ಶೆಟ್ಟಿ, ಮಟಪಾಡಿಯ ಸತ್ಯಪ್ರಸಾದ ಶೆಣೈ, ರಾಜಮೋಹನ ನಾಯರಿ, ವೈದ್ಯ ಡಾ.ಸತೀಶ ಪೈ, ನಂದಿಕೇಶ್ವರ ದೇವಸ್ಥಾನದ ಮುಕ್ಕಾಲು ಶೆಟ್ಟಿಯವರಾದ ಸರ್ವೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಅಧ್ಯಕ್ಷತೆಯನ್ನು ದೇವಸ್ಥಾನದ ಮೊಕ್ತೇಸರ, ಪ್ರತಿಷ್ಠಾನದ ನಿರ್ವಾಹಕ ವಿಶ್ವಸ್ತ ಗಿರೀಶ್ಚಂದ್ರ ಆಚಾರ್ಯ ವಹಿಸಿದ್ದರು. ದೇವಸ್ಥಾನ ಮತ್ತು ಪ್ರತಿಷ್ಠಾನದ ವತಿ ಯಿಂದ ಸಚಿವರನ್ನು ಗೌರವಿಸಲಾಯಿತು.

ವಿಶ್ವಸ್ತರಾದ ವಿಶ್ವನಾಥ ಶೆಟ್ಟಿ ಸ್ವಾಗತಿಸಿ, ಎಂ.ಚಂದ್ರಶೇಖರ ನಾಯರಿ ದಾನಿಗಳ ಪಟ್ಟಿಯನ್ನು ವಾಚಿಸಿದರು. ಮಟಪಾಡಿ ಪ್ರೌಢಶಾಲಾ ಮುಖ್ಯಶಿಕ್ಷಕ ಅಶೋಕ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಪ್ರಸ್ತಾವನೆಗೈದರು. ಸೂರ್ಯನಾರಾಯಣ ಗಾಣಿಗ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News