×
Ad

ಬೊಗೊಟದಲ್ಲಿ ಸ್ಫೋಟ: 26 ಮಂದಿಗೆ ಗಾಯ

Update: 2017-02-20 22:09 IST

ಬೊಗೊಟ (ಕೊಲಂಬಿಯ), ಫೆ. 20: ಕೊಲಂಬಿಯದ ರಾಜಧಾನಿ ಬೊಗೊಟದಲ್ಲಿ ರವಿವಾರ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 26 ಮಂದಿ ಗಾಯಗೊಂಡಿದ್ದಾರೆ. ಅವರ ಪೈಕಿ ಹೆಚ್ಚಿನವರು ಗೂಳಿಕಾಳಗ ನಡೆಯುವ ಅಖಾಡವನ್ನು ಕಾಯುತ್ತಿದ್ದ ಪೊಲೀಸರಾಗಿದ್ದರು.

ಈ ಅಖಾಡ ಕಳೆದ ತಿಂಗಳು ಪುನಾರಂಭಗೊಂಡಿದ್ದು, ಅದರ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದರು.

ಗಾಯಗೊಂಡ 26 ಮಂದಿಯ ಪೈಕಿ ಇಬ್ಬರು ನಾಗರಿಕರು ಹಾಗೂ ಉಳಿದವರು ಪೊಲೀಸರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

 ಮಾಜಿ ಮೇಯರ್ ಗುಸ್ತಾವೊ ಪೆಟ್ರೊ ಈ ಗೂಳಿ ಕಾಳಗವನ್ನು 2012ರಲ್ಲಿ ನಿಲ್ಲಿಸಿದ್ದರು. ಈಗ ದೇಶದ ಸಾಂವಿಧಾನಿಕ ನ್ಯಾಯಾಲಯವೊಂದು ಗೂಳಿಕಾಳಗಕ್ಕೆ ಮರು ಚಾಲನೆ ನೀಡಿದೆ.

ಜನರು ಅದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಶ್ರೀಮಂತರ ಸಮಯ ಕಳೆಯುವ ಕ್ರೀಡೆ ಎಂದು ಅವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News