ಗೂಡ್ಸ್ ರೈಲಿಗೆ ಎಕ್ಸ್‌ಪ್ರೆಸ್ ಢಿಕ್ಕಿ
Update: 2017-02-20 23:41 IST
ಫಿರೋಜಾಬಾದ್,ಫೆ.20: ದಿಲ್ಲಿಗೆ ಪ್ರಯಾಣಿಸುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್ ರೈಲು, ಸರಕು ಸಾಗಣೆ ರೈಲಿಗೆ ಢಿಕ್ಕಿ ಹೊಡೆದು ಹಳಿ ತಪ್ಪಿದ ಘಟನೆ ಸೋಮವಾರ ನಸುಕಿನಲ್ಲಿ ತುಂಡ್ಲಾ ಜಂಕ್ಷನ್‌ನಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.
ಕಾನ್ಪುರದಿಂದ ದಿಲ್ಲಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಚಾಲಕ ಸಿಗ್ನಲ್‌ನ್ನು ಕಡೆಗಣಿಸಿ ಮುಂದಕ್ಕೆ ಚಲಾಯಿಸಿದ್ದು ಈ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಎಕ್ಸ್‌ಪ್ರೆಸ್‌ನ ಆರು ಬೋಗಿಗಳು ಹಳಿ ತಪ್ಪಿದ್ದು, ಕಾನ್ಪುರ್-ದಿಲ್ಲಿ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು.