×
Ad

ನಾಳೆಯಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಸಾಂಸ್ಕೃತಿಕ ಸ್ಪರ್ಧೆ

Update: 2017-02-20 23:59 IST

ಮಂಗಳೂರು, ಫೆ.20: ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಶ್ರಯದಲ್ಲಿ ಫೆ.22ರಿಂದ 25ರವರೆಗೆ ಅಂತರ್ ಕಾಲೇಜು ಸಂಗೀತ, ಕಲೆ ಮತ್ತು ಕ್ರೀಡಾ ಸ್ಪರ್ಧೆ ಅಡ್ರಿನಾಲಿನ್-2017 ಆಯೋಜಿಸಲಾಗಿದೆ.

ಮೂರನೆ ವರ್ಷದ ಅಡ್ರಿನಾಲಿನ್-2017 ಸ್ಪರ್ಧೆಯು 40ಕ್ಕೂ ಹೆಚ್ಚು ಸಾಂಸ್ಕೃತಿಕ, ಸಾಹಿತ್ಯಿಕ, ಕುಶಲಕಲೆ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಗಾಯಕಿ, ಮಲಯಾಳಂ ಟಿವಿ ನಿರೂಪಕಿ ರಿಮಿ ಟೋಮಿ ಆಗಮಿಸುವರು. ಸಮಾರೋಪ ಸಮಾರಂಭದಲ್ಲಿ ಇಂಡಿ-ಫೋಕ್-ಆಲ್ಟರ್‌ನೇಟಿವ್ ಬ್ಯಾಂಡ್ ವೆನ್ ಚಾಯ್ ಮೆಟ್ ಟೋಸ್ಟ್ ಕಾರ್ಯಕ್ರಮ ನಡೆಸಿಕೊಡಲಿದೆ. ವೈವಿಧ್ಯಮಯ ಸ್ಪರ್ಧೆಗಳ ಜೊತೆಗೆ ಈ ಉತ್ಸವದಲ್ಲಿ ಆರು ಹೊಸ ಕೌಶಲಗಳನ್ನು ಕಲಿಯುವ ಅವಕಾಶ ಲಭ್ಯವಾಗಲಿದೆ. ಎಲ್ಲ ಕಾರ್ಯಾಗಾರಗಳನ್ನು ವೃತ್ತಿಪರರು ನಡೆಸಿಕೊಡಲಿದ್ದು, ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಉತ್ತೇಜಿಸುವ ಸಲುವಾಗಿ ಕನಿಷ್ಠ ಶುಲ್ಕ ನಿಗದಿಪಡಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಫಾದರ್ ಮುಲ್ಲರ್ ಮುಖ್ಯ ಕ್ರೀಡಾಂಗಣದಲ್ಲಿ ಇದು ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News