ತ್ವಲಬಾ ವಿಂಗ್: ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನಾಚರಣೆ
ತೋಡಾರು, ಫೆ.21: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ವಿದ್ಯಾರ್ಥಿ ಒಕ್ಕೂಟವಾದ ಎಸ್ಕೆಎಸ್ಸೆಎಸ್ಸೆಫ್ ಸ್ಥಾಪನಾ ದಿನಾಚರಣೆಯನ್ನು ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನಲ್ಲಿ ತ್ವಲಬಾ ವಿಂಗ್ ತೋಡಾರು ಕ್ಯಾಂಪಸ್ ಘಟಕದ ವತಿಯಿಂದ ನಡೆಸಲಾಯಿತು.
ಸಂಸ್ಥೆಯ ಉಪಪ್ರಾಂಶುಪಾಲರಾದ ಮುಫ್ತಿ ರಫೀಕ್ ಅಹ್ಮದ್ ಹುದವಿ ಕೋಲಾರ ಧ್ವಜಾರೋಹಣ ನೆರವೇರಿಸಿದರು. ಮುದರ್ರಿಸರಾದ ಅಬ್ದುಸ್ಸಲಾಂ ಬಾಖವಿ ದುಃಆ ನೆರವೇರಿಸಿದರು. ಎಸ್ಕೆ ಎಸ್ಸೆಎಸ್ಸೆಫ್ ಕೇಂದ್ರ ಸಮಿತಿಯ ಮುಸ್ತಫಾ ಅಶ್ರಫಿ ಕಕ್ಕುಪಡಿ ಅಹ್ಲುಸ್ಸುನ್ನತಿ ವಲ್ ಜಮಾಅತ್ ಎಂಬ ವಿಷಯದಲ್ಲಿ ಮಾಹಿತಿ ನೀಡಿದರು. ತ್ವಲಬಾ ವಿಂಗ್ ಜಿಲ್ಲಾ ಚೆಯರ್ ಮೆನ್ ಅಹ್ಮದ್ ನಈಂ ಮುಕ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತ್ತೀಚೆಗೆ ನಿಧನರಾದ ಕೋಟುಮಲ ಬಾಪು ಮುಸ್ಲಿಯಾರ್ ಸೇರಿದಂತೆ ಅಗಲಿದ ಸಮಸ್ತ ನೇತಾರರ ಹೆಸರಿನಲ್ಲಿ ದುಃಆ ಮಜ್ಲಿಸ್ ನಡೆಯಿತು.
ಈ ಸಂದರ್ಭದಲ್ಲಿ ಅಬ್ದುಸ್ಸಲಾಂ ಫೈಝಿ ಎಡಪ್ಪಾಲ್, ಶಂಸುದ್ದೀನ್ ಯಮಾನಿ, ಶಬೀರ್ ಫೈಝಿ ಬಂದ್ಯೋಡ್, ಬಅಬ್ದುರ್ರಹ್ಮಾನ್ ಹುದವಿ, ಅಬ್ದುರ್ರವೂಫ್ ಹುದವಿ, ನಝೀರ್ ಫೈಝಿ, ಅಬೂಬಕ್ಕರ್ ಅಝ್ಹರಿ, ಸಿರಾಜ್ ಮಾಸ್ಟರ್, ಅನ್ವರ್ ಮಾಸ್ಟರ್ ಉಪಸ್ಥಿತರಿದ್ದರು.