ಮಡಂತ್ಯಾರು: ರಸ್ತೆ ದುರಸ್ಥಿಗೆ ಒತ್ತಾಯಿಸಿ ಎಸ್ಡಿಪಿಐಯಿಂದ ಗ್ರಾಮ ಪಂಚಾಯತ್ ಗೆ ಮನವಿ
Update: 2017-02-21 12:23 IST
ಮಡಂತ್ಯಾರು, ಫೆ.21: ಮಾಲಾಡಿ ಗ್ರಾಮದ ಪಲ್ಕೆ, ಸೋನಂದೂರು ಎಂಬಲ್ಲಿ ರಸ್ತೆ ಡಾಮಾರು ಹದೆಗೆಟ್ಟಿದೆ. ಇಲ್ಲಿ ಅನೇಕ ವಾಹನಗಳು ಈ ಮಾರ್ಗದ ಮೂಲಕ ಸಂಚರಿಸುತ್ತಿದ್ದು, ಅನೇಕ ಅಪಘಾತಗಳು ಸಂಭವಿಸಿದೆ.
ರಸ್ತೆಯ ಅಪಾಯದಂಚಿನಲ್ಲಿದ್ದು, ಈ ರಸ್ತೆಯಲ್ಲಿ ಶೀಘ್ರ ದುರಸ್ತಿ ಮಾಡುವಂತೆ ಒತ್ತಾಯಿಸಿ ಎಸ್‌ಡಿಪಿಐ ಮಡಂತ್ಯಾರು ವಲಯ ಸಮಿತಿಯವರು ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಲಯಾಧ್ಯಕ್ಷ ರಿಯಾಝ್ ಪುಂಜಾಲಕಟ್ಟೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಪೋಲಿಯನ್ ಲಸ್ರಾದೋ ಮತ್ತಿತರರು ಉಪಸ್ಥಿತರಿದ್ದರು.