ಬೇಡಿಕೆ ಈಡೇರಿಸಲು ಬೀದಿ-ಬದಿ ವ್ಯಾಪಾರಸ್ಥರಿಂದ ಮುಖ್ಯ ಸಚೇತಕ ಐವನ್ ಡಿ’ಸೋಝಾರಿಗೆ ಮನವಿ
ಮಂಗಳೂರು, ಫೆ.21: ಮಹಾನಗರ ಪಾಲಿಕೆ ಸುತ್ತಮುತ್ತ ಬೀದಿಬದಿಯಲ್ಲಿ ವ್ಯಾಪಾರ ನಡೆಸುವ ವ್ಯಾಪಾರಿಗಳು ಅವಿದ್ಯಾವಂತರಾಗಿದ್ದು, ಬೀದಿ ಬದಿಯ ವ್ಯಾಪಾರವನ್ನು ನಡೆಸಿಕೊಂಡು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಇವರೆಲ್ಲಾ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದು, ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರೊಂದಿಗೆ ಸರಕಾರಿ ಮುಖ್ಯ ಸಚೇತಕ ಐವನ್ ಡಿ’ ಸೋಝಾರವರು ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರಕಾರಿ ಮುಖ್ಯ ಸಚೇತಕರಿಗೆ ಮನವಿಯನ್ನು ಸಲ್ಲಿಸಿದರು. ಈ ಬಗ್ಗೆ ಸ್ಥಳದಲ್ಲಿದ್ದ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಕಂದಾಯ ಅಧಿಕಾರಿ ಪ್ರವೀಣ್, ಅಧ್ಯಕ್ಷ ಮುಹಮ್ಮದ್ ರಫೀ, ಎಮ್ಮೆಕೆರೆ ಸಲಾಂ, ಹಕೀಂ ವಾಮಂಜೂರು, ಮುಹಮ್ಮದ್ ಹನೀಫ್, ಜಯಾನಂದ, ಅಬ್ದುಲ್ ಖಾದರ್, ಹಸನ್ ಕುದ್ರೋಳಿ, ಅವಿನಾಶ್ ಮತ್ತಿತರು ಜೊತೆಗಿದ್ದರು.