×
Ad

ಅರಣ್ಯ ರಕ್ಷಕರಿಗೂ ಯೋಧರ ರೀತಿಯ ಸೌಲಭ್ಯ ನೀಡಲು ಆಗ್ರಹ

Update: 2017-02-21 13:29 IST

ಮಂಗಳೂರು,ಫೆ.21: ಬಂಡಿಪುರ ಅರಣ್ಯ ರಕ್ಷಣೆಯ ಕರ್ತವ್ಯದಲ್ಲಿ ನಿರತ ನಾಗಿದ್ದ ಮುರುಗಪ್ಪ ತಮ್ಮನಗೋಳ್ ಮತೃಪಟ್ಟವರು ಹಾಗೂ ಗಾಯಗೊಂಡ ಮೂವರು ಅಧಿಕಾರಿಗಳಿಗೆ ಮತ್ತು ಮೃತರಾದವರಿಗೆ ಸೂಕ್ತ ಪರಿಹಾರ ನೀಡಬೇಕು ಅರಣ್ಯ ರಕ್ಷಕರಿಗೆ ದೇಶದ ಗಡಿ ಕಾಯುವ ಯೋಧರಿಗೆ ನೀಡುವಂತೆ ಸೂಕ್ತ ಸಲಕರಣೆ ಭದ್ರತೆ ನೀಡಲು ಆಗ್ರಹಿಸಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ನಗರದ ಜಿಲ್ಲಾ ಅರಣ್ಯಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.

ಸ್ವಾತಂತ್ರ ನಂತರ 70 ವರ್ಷ ಕಳೆದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಆಧುನಿಕ ಯಂತ್ರೋಪಕರಣಗಳು ,ಹೆಲಿಕಾಪ್ಟರ್,ಬೆಂಕಿ ನಿರೋಧಕ ಜಾಕೆಟ್,ಆಮ್ಲಜನಕದ ಸಿಲಿಂಡರ್,ಬೆಂಕಿ ನಂದಿಸುವ ಯಂತ್ರಗಳನ್ನು ಅರಣ್ಯ ಇಲಾಖೆಗೆ ನೀಡುವಂತೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಅರಣ್ಯ ಇಲಾಖೆಯನ್ನು 15 ವಲಯಗಳಾಗಿ ವಿಂಗಡಿಸಬೇಕು,ಸೂಕ್ತ ಸಲಕರಣೆ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ,ಹೆಚ್ಚಿನ ಸಿಬ್ಬಂದಿಗಳ ನೇಮಕ,ಎಲ್ಲಾ ಜಿಲ್ಲೆಗಳಲ್ಲಿ ಅರಣ್ಯ ನಿರೀಕ್ಷಣಾ ಘಟಕ,ಸ್ಯಾಟಲೈಟ್ ಮೂಲಕ ಕಾಡಿನ ಕಣ್ಗಾವಲು ನಡೆಸಬೇಕು,ಅರಣ್ಯ ಇಲಾಖೆಯ ಅಧಿಕಾರಿಗಳ ವೇತನ ಹೆಚ್ಚಳ ಮಾಡಬೇಕು.ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅರಣ್ಯ ರಕ್ಷಕರಿಗೆ ವಿಶೇಷ ಭದ್ರತೆ ಮತ್ತು ಆಧುನಿಕ ಶಸ್ತ್ರಾ ಸ್ತ್ರಗಳನ್ನು ಪೂರೈಸುವುದು.ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸುವುದು.ಅರಣ್ಯದಲ್ಲಿ ಅಕ್ರಮ ಪ್ರವೇಶ ಮಾಡಿ ಅರಣ್ಯ ನಾಶ ಮಾಡುವವರ ವಿರುದ್ಧ ನಿಗಾ ಇಡುವುದು,ಅರಣ್ಯ ರಕ್ಷಕರಿಗೆ ಸ್ವಯಂ ರಕ್ಷಣೆಗೆ ಅವಕಾಶ ಕಲ್ಪಿಸುವ ನೀತಿಯನ್ನು ರೂಪಿಸಲು ಕಾರ್ಯಕರ್ತರು ಆಗ್ರಹಿಸಿದರು.

ಅರಣ್ಯ ಇಲಾಖೆಗೆ ಸಂಬಂಧಿಸಿದ ಬೇಡಿಕೆ ಈಡೇರಿಕೆಗೆ ರಾಜ್ಯ ಅರಣ್ಯ,ಪರಿಸರ ಸಚಿವರಿಗೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್‌ಗೆ ಅರಣ್ಯ ಇಲಾಖೆಗೆ ಆಧುನಿಕ ಸಲಕರಣೆ ಒದಗಿಸಬೇಕು ಎಂದು ಆಗ್ರಹಿಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮೂಲಕ ಮನವಿ ಸಲ್ಲಿಸಿದರು.

ಪ್ರತಿಭಟನಾ ಸಭೆಯಲ್ಲಿ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಂಚಾಲಕ ದಿನೇಶ್ ಹೊಳ್ಳ,ಹಾಗೂ ಇತರ ಪದಾಧಿಕಾರಗಳಾದ ಸುವರ್ಣ ಸುಂದರ್, ಶಶಿಧರ್,ರತ್ನಾಕರ ಸುವರ್ಣ,ಅನಿತಾ ಭಂರ್ಡಾಕರ್,ಶ್ರೀಪತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News