×
Ad

ಹೊನ್ನಾವರ: ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ಗೆ ಆಕಸ್ಮಿಕ ಬೆಂಕಿ

Update: 2017-02-21 16:01 IST

ಹೊನ್ನಾವರ, ಫೆ.21: ತಾಲೂಕಿನ ಹಳದೀಪುರದ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್ ಆಕಸ್ಮಿಕ ಬೆಂಕಿ ಅನಾಹುತಕ್ಕೊಳಗಾಗಿ ಲಕ್ಷಾಂತರ ರೂ. ಹಾನಿ ಸಂಭವಿಸಿದೆ

ಕಾಸರಕೋಡ ಟೊಂಕದ ಖಾದರ್ ಸಾಬ್ ಅಬ್ದುಲ್ ರಝಾಕ್ ಎಂಬವರಿಗೆ ಸೇರಿದ ಬೋಟ್ ಶನಿವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಬೋಟ್‌ನಲ್ಲಿದ್ದ ಖಳಾಸಿ ಅನಂತ ಅಂಬಿಗ ಗಂಜಿ ತಯಾರಿಸಲು ಸ್ಟೋವ್ ಹೊತ್ತಿಸಿದಾಗ ಸ್ಟೋವ್‌ನ ಬೆಂಕಿ ಬೋಟ್‌ನ ಡಿಸೇಲ್ ಟ್ಯಾಂಕ್‌ಗೆ ಸೋಕಿದೆ. ಬೆಂಕಿ ತಗುಲಿದ ಡಿಸೇಲ್ ಟ್ಯಾಂಕ್ ಸ್ಪೋಟಗೊಂಡು ಬೋಟ್ ಸುಟ್ಟು ಹಾನಿಯಾಗಿದೆ. ಹತ್ತಿರದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಇನ್ನೆರಡು ಬೋಟ್‌ಗಳಲ್ಲಿದ್ದ ಮೀನುಗಾರರು ಸಹಾಯ ಮಾಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅನಾಹುತದಿಂದಾಗಿ ಸುಮಾರು 8 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News