×
Ad

ಬೈಕ್ ಖರೀದಿ ಹಣ ನೀಡದಕ್ಕೆ ಕೊಲೆಗೈದು ಹೊಂಡದಲ್ಲಿ ಹೂತ!

Update: 2017-02-21 16:36 IST

ಹೊನ್ನಾವರ, ಫೆ.21: ಬೈಕ್ ಖರೀದಿ ಮಾಡಿ ಹಣವನ್ನು ನೀಡದೇ ಇರುವುದಕ್ಕೆ ಕೋಪಗೊಂಡು ವ್ಯಕ್ತಿಯೊಬ್ಬನನ್ನು ಕೊಲೆಗೈದು ಹೊಂಡದಲ್ಲಿ ಹೂತು ಹಾಕಿದ ಘಟನೆ ತಾಲೂಕಿನ ಹಿರೇಬೈಲ್‌ದ ಸೋಮಹೊಂಡದಲ್ಲಿ ಬೆಳಕಿಗೆ ಬಂದಿದೆ.

ದಿಬ್ಬಣಗಲ್ ನಿವಾಸಿ ನಾಗರಾಜ ಯಶವಂತ ಮೇಸ್ತ (32) ಕೊಲೆಯಾದ ವ್ಯಕ್ತಿ. ಈತ ಜನ್ನಕಡಕಲ್‌ದ ನಿವಾಸಿ ಮೋಹನ ಮರಾಠೆ (40) ಈತನಿಂದ ಬೈಕ್ ಪಡೆದಿದ್ದು ಹಣವನ್ನು ನೀಡದೇ ಸತಾಯಿಸುತ್ತಿದ್ದ ಎನ್ನಲಾಗಿದೆ.

ಮೋಹನ ಮರಾಠೆ ನಾಗರಾಜನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆಮಾಡಿ ಹೊಂಡದಲ್ಲಿ ಮುಚ್ಚಿ ಹಾಕಿದ್ದಾನೆ ಎಂದು ಮೃತನ ಹೆಂಡತಿ ಲತಾ ಮೇಸ್ತ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News