ಅಂತಾರಾಷ್ಟ್ರಿಯ ಮಟ್ಟದ ಕರಾಟೆ ಸ್ಪರ್ಧೆ: ಶ್ರೀಶಾಗೆ ಚಿನ್ನ, ಬೆಳ್ಳಿ ಪದಕ
ಹೊನ್ನಾವರ, ಫೆ.21: ಭಾರತ ಹಾಗೂ ಶ್ರೀಲಂಕಾದ ನಡುವೆ ನಡೆದ ಅಂತಾರಾಷ್ಟ್ರಿಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಿದ ಬಾಲಕಲಾಪ್ರವಿಣೆ ಪ್ರಶಸ್ತಿ ವಿಜೇತೆ ಕು. ಶ್ರೀಶಾ ಜಯಂತ ಹರಿಕಾಂತ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದಿದ್ದಾರೆ.
ಹರಿಹರದಲ್ಲಿ ಫೇಡರೇಶನ್ ಆಫ್ ಓಕಿನವಾ ಕರಾಟೆ, ಡು ಶೋರಿನ್ ರಾಯ್ ಶೊರಿನಖಾನ್ ಇಂಡಿಯಾ ಆಶ್ರಯದಲ್ಲಿ ಮೊದಲ ಇಂಡೋ-ಶ್ರೀಲಂಕಾ ಕರಾಟೆ ಕುಬಡೋ ಇಂಟರ್ ನ್ಯಾಶನಲ್ ಚಾಂಪಿಯನ್‌ಶಿಪ್ ನಡೆದಿತ್ತು.
31 ರಿಂದ 35 ಕೆಜಿ ವಿಭಾಗದ ಕುಮಿತೆ ಸ್ಪೈರಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 10 ರಿಂದ 12ರ ವಯೋಮಿತಿಯ ವಿಭಾಗದ ಕಟಾ ಸ್ಫರ್ಧೆಯಲ್ಲಿ ಬೆಳ್ಳಿಪದಕ ಪಡೆದುಕೊಂಡಿದ್ದಾರೆ.
ಕೇಂದ್ರ ಸರಕಾರದ ಮಿನಿಸ್ಟ್ರೀ ಆಫ್ ಯುತ್ ಅಫೇರ್ಸ್ ಎಂಡ್ ಸ್ಪೋಟ್ಸ್ ಮಾನ್ಯತೆ ಪಡೆದ ಸಂಸ್ಥೆಗಳಿಂದ ಆಯೋಜಿಸಿದ ಕರಾಟೆ ಸ್ಪರ್ಧೆ ಯಲ್ಲಿ ಶ್ರೀಲಂಕಾ ಹಾಗೂ ಭಾರತ ದೇಶಪ್ರತಿನಿಸಿದ ಈ ಸ್ಪರ್ಧೆಯಲ್ಲಿ ನಮ್ಮ ರಾಜ್ಯದೊಂದಿಗೆ ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರ, ಓರಿಸ್ಸಾ, ಉತ್ತರಪ್ರದೇಶ ಮುಂತಾದ ರಾಜ್ಯಗಳು ಪ್ರತಿನಿಧಿಸಿದ್ದವು.
ಕು. ಶ್ರೀಶಾ ಹರಿಕಾಂತ ಹೊನ್ನಾವರ ಮಾರ್ಥೋಮಾ ಆಂಗ್ಲ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಹೊನ್ನಾವರದ ಹಂದೇಶ ಕರಾಟೆ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಇವಳಿಗೆ ಕರಾಟೆ ಶಿಕ್ಷಕರಾದ ಎಸ್.ಪಿ.ಹಂದೆ, ದಯಾ ನಾಯ್ಕ ಕುಮಟಾ, ರಾಜೇಶ ಪಟಗಾರ ತರಬೇತಿ ನೀಡುತ್ತಿದ್ದಾರೆ.
ಇವರ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಭಟ್, ಮಾರ್ಥೋಮಾ ಪ್ರಾಂಶುಪಾಲ ಜಾನ್ ಪಿ. ಜಾನ್, ಖಜಾಂಚಿ ಕೆ.ಸಿ.ವರ್ಗೀಸ್ ಹಾಗೂ ಶಿಕ್ಷಕವೃಂದ, ವಿದ್ಯಾರ್ಥಿಗಳು ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.