×
Ad

ಸುಳ್ಯ: ಫೆ. 23ರಂದು ನವಗ್ರಹ ಮಂದಿರ, ಸಮುದಾಯ ಭವನದ ಶಿಲಾನ್ಯಾಸ

Update: 2017-02-21 17:05 IST

ಸುಳ್ಯ, ಫೆ.21: ಶ್ರೀಗುರು ರಾಘವೇಂದ್ರ ಮಠ ನಿರ್ಮಾಣ ಸಮಿತಿ, ಸುಳ್ಯ ತಾಲೂಕು ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ನವಗ್ರಹ ಮಂದಿರ ಮತ್ತು ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮವು ಫೆ. 23 ರಂದು ಪೂರ್ವಾಹ್ನ 9:30ಕ್ಕೆ ಶ್ರೀಚೆನ್ನಕೇಶವ ದೇವರ ಜಳಕದ ಕಟ್ಟೆ ಬಳಿ ಇರುವ ರಾಯರ ಮಠದ ಆವರಣದಲ್ಲಿ ನೆರವೇರಲಿದೆ ಎಂದು ಮಠ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಪಿ.ಬಿ.ಸುಧಾಕರ ರೈ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ಅಂಗಾರ ಅವರು ವಹಿಸಲಿದ್ದಾರೆ. ಗೋಪುರ ಶಿಲಾನ್ಯಾಸವನ್ನು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು, ಸಮುದಾಯ ಭವನದ ಶಿಲಾನ್ಯಾಸವನ್ನು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು ,ನವಗ್ರಹ ಮಂದಿರದ ಶಿಲಾನ್ಯಾಸವನ್ನು ಐವರ್ನಾಡು ಶ್ರೀಪಂಚಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಾಲೆಪ್ಪಾಡಿ ಗಣಪಯ್ಯ ಅವರು ನೆರವೇರಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಹಾಗೂ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಡಾ ಕೆ.ವಿ.ಚಿದಾನಂದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ ಭಾರದ್ವಾಜ, ಕ.ಸಾ.ಪ.ಸುಳ್ಯ ತಾಲೂಕು ಮಾಜಿ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ, ಕೆವಿಜಿ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ ವಿದ್ಯಾಶಾಂಭವ ಪಾರೆ, ರಾಜೀವಗಾಂಧಿ ವೈದ್ಯಕೀಯ ಮಹಾವಿದ್ಯಾಲಯದ ಸೆನೆಟ್ ಸದಸ್ಯ ಡಾ ಕಿರಣ್, ಧಾರ್ಮಿಕ ಪರಿಷತ್ ಸದಸ್ಯ ಜಗನ್ನೀವಾಸ ರಾವ್. ಹಿರಿಯರಾದ ರಾಧಾಕೃಷ್ಣ ಕಲ್ಲೂರಾಯ ಕಾಂತಮಂಗಲ ಇವರು ಭಾಗವಹಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News