×
Ad

ಮಂಗಳೂರು: ಫೆ.25ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಸಂಘ ಪರಿವಾರ ಕರೆ

Update: 2017-02-21 18:26 IST

ಮಂಗಳೂರು, ಫೆ.21: ಫೆ.25ರಂದು ನಡೆಯಲಿರುವ ಸೌಹಾರ್ದ ರ‍್ಯಾಲಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮಂಗಳೂರು ಭೇಟಿಗೆ ವಿರೋಧಿಸಿ  ಆರೆಸ್ಸೆಸ್ ನೇತೃತ್ವದಲ್ಲಿ ಸಂಘಪರಿವಾರ ಫೆ.25ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಕರೆ ನೀಡಿದೆ.

ಸಂಘನಿಕೇತನದ ಸಂಘಪರಿವಾರದ ಸಭೆಯಲ್ಲಿ ನಿರ್ಧಾರ ಪ್ರಕಟಿಸಿದ ಸಂಘ ಪ್ರಮುಖರು, ಫೆ.24ರಂದು ಬೆಳಿಗ್ಗೆ 10 ಗಂಟೆಗೆ ಜ್ಯೋತಿ ವೃತ್ತದಿಂದ ನೆಹರೂ ಮೈದಾನಕ್ಕೆ ಕಾಲ್ನಡಿಗೆ ಜಾಥ ನಡೆಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ನಂತರ ಫೆ.೨೫ರಂದು ಹರತಾಳ ನಡೆಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News