×
Ad

ಸಿಪಿಐ (ಎಂ) ರ‍್ಯಾಲಿ ತಡೆಗೆ ಯತ್ನಿಸುತ್ತಿರುವ ಕೋಮುಶಕ್ತಿಗಳ ವಿರುದ್ಧ ಕಠಿಣ ಕ್ರಮ ಕ್ಕೆ ಡಿವೈಎಫ್‌ಐ ಆಗ್ರಹ

Update: 2017-02-21 18:32 IST

ಮಂಗಳೂರು,ಫೆ.21:ನಗರದ ನೆಹರೂ ಮೈದಾನದಲ್ಲಿ ಫೆ.25ರಂದು ನಡೆಯಲಿರುವ ಸಿಪಿಐ(ಎಂ)ಸಮಾವೇಶ ಮತ್ತು ರ‍್ಯಾಲಿಗೆ ಅಡ್ಡಿಯುಂಟು ಮಾಡಲು ಯತ್ನಿಸುತ್ತಿರುವ ಕೋಮು ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳುವಂತೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈ ಗೊಳ್ಳಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

ಕರಾವಳಿಯಲ್ಲಿ ಸಿಪಿಐ(ಎಂ) ಪಕ್ಷದ ವತಿಯಿಂದ ಹಮ್ಮಿಕೊಂಡ ರ‍್ಯಾಲಿ ಹಾಗೂ ಸಮಾವೇಶಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಸಹಿಸಲಾರದೆ ಕಾರ್ಯಕ್ರಮವನ್ನು ವಿಫಲಗೊಳಿಸಲು ಬಜರಂಗದಳ,ವಿಚ್‌ಪಿ ಬಂದ್‌ಗೆ ಕರೆ ನೀಡಿ ಜನರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದೆ.ಪ್ರಜಾಸತ್ತಾತ್ಮಕ ನೆಲೆಯಲ್ಲಿ ಸಭೆ ಸಮಾರಂಭ ನಡೆಸಲು ಸಂವಿಧಾನದತ್ತವಾದ ಹಕ್ಕನ್ನು ಚಲಾಯಿಸಲು ಬಲವಂತವಾಗಿ ತಡೆಯುವುದು ಕಾನೂನು ಬಾಹಿರ.ಸಂಘ ಪರಿವಾರ ಪ್ರಜಾಸತ್ತೆಯ ಬಗ್ಗೆ ಗೌರವ ಹೊಂದಿದ್ದರೆ ತಕ್ಷಣ ಬಂದ್ ಕರೆಯನ್ನು ಹಿಂದಕ್ಕೆ ಪಡೆಯಲಿ ಎಂದು ಹೇಳಿದ್ದದಾರೆ.

ದಕ್ಷಿಣ ಕನ್ನಡದಲ್ಲಿ 13 ಮಂದಿ,ಕೇರಳದಲ್ಲಿ 250ಕ್ಕೂ ಅಧಿಕ ಮಂದಿ ಸಂಘಪರಿವಾದರಿಂದ ಕೊಲೆ ಗೀಡಾಗಿದ್ದಾರೆ ಇವರಲ್ಲಿ ಹೆಚ್ಚಿನವರು ಹಿಂದುಗಳು. ಕೇರಳದ ಬಿಜೆಪಿಯ ಉಸ್ತುವಾರಿಯಾಗಿ ಕಾರ್ಯನಿ ರ್ವಹಿಸುತ್ತಿರುವ ನಳಿನ್ ಕುಮಾರ್ ಕಟೀಲ್ ಕೇರಳ ಪ್ರವೇಶಕ್ಕೆ ಸಿಪಿಎಂ ತಡೆ ಉಂಟು ಮಾಡಿಲ್ಲ.ಮೋದಿಯ ಮೇಲೆ ಗುಜರಾತ್ ಹತ್ಯಾಕಾಂಡದ ಆರೋಪ ಇದ್ದ ಸಂದರ್ಭದಲ್ಲಿ ಸಿಪಿಎಂ ಅಧಿಕಾರದಲ್ಲಿರುವ ಕಡೆ ಬಂದಾಗ ಅವರನ್ನು ವಿರೊಧಿಸಲಿಲ್ಲ.ಪ್ರಸಕ್ತ ಜಿಲ್ಲೆಯಲ್ಲಿ ಸೌಹಾರ್ದ ರ‍್ಯಾಲಿ ಹಮ್ಮಿಕೊಂಡ ಸಂದರ್ಭದಲ್ಲಿ ಅದನ್ನು ತಡೆಯಲೆತ್ನಿಸುತ್ತಿರುವುದು ಕಾನೂನು ಬಾಹಿರ ಪ್ರತಿಭಟನೆಯ ಹಕ್ಕು ಎಲ್ಲರಿಗೂ ಇದೆ ಆದರೆ ಇತರರ ಕಾರ್ಯಕ್ರಮ ನಡೆದಂತೆ ಬಲವಂತವಾಗಿ ಬಂದ್ ನಡೆಸಲು ಮುಂದಾಗುತ್ತಿರುವ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈ ಗೊಳ್ಳುವಂತೆ ರಾಜ್ಯದ ಮುಖ್ಯ ಮಂತ್ರಿಗೆ ಡಿವೈಎಫ್‌ಐ ಮನವಿ ಸಲ್ಲಿಸಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಡಿವೈಎಫ್‌ಐ ಮುಖಂಡರಾದ ದಯಾನಂದ ಶೆಟ್ಟಿ,ಸಂತೋಷ್ ಬಜಾಲ್,ಬಿ.ಕೆ.ಇಮ್ತಿಯಾಝ್,ನವೀನ್ ಕೊಂಚಾಡಿ,ಸಾದಿಕ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News