ಮಂಗಳೂರು: ಅಝ್‌ಹರೀಸ್‌ಗೆ ಪದಾಧಿಕಾರಿಗಳ ಆಯ್ಕೆ
Update: 2017-02-21 18:59 IST
ಮಂಗಳೂರು, ಫೆ.21: ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಮತ್ತು ಅಝ್‌ಹರೀಸ್ ಸಂಗಮವು ಗೂಡಿನ ಬಳಿ ಮದ್ರಸದಲ್ಲಿ ಇತ್ತೀಚೆಗೆ ಜರಗಿತು. ಆಸೀಫ್ ಅಝ್‌ಹರಿ ಸಭೆ ಉದ್ಘಾಟಿಸಿದರು.
ದ.ಕ.ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ನಝೀರ್ ಅಝ್‌ಹರಿ ಬೊಳ್ಮಿನಾರ್, ಉಪಾಧ್ಯಕ್ಷ ಆಸೀಫ್ ಅಝ್‌ಹರಿ ಮಿತ್ತೂರು, ಉಮರ್ ಅಝ್‌ಹರಿ, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಅಝ್‌ಹರಿ ಸವಣೂರು, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಅಝ್‌ಹರಿ ಗಟ್ಟಿಮನೆ, ಖಲಂದರ್ ಶಾಫಿ ಅಝ್‌ಹರಿ ಕರಾಯ, ಕೋಶಾಧಿಕಾರಿಯಾಗಿ ಶಂಸುದ್ದೀನ್ ಅಝ್‌ಹರಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಮುನೀರ್ ಅಝ್‌ಹರಿ ಕುಂಬ್ರ ಹಾಗೂ ಗೌರವ ಸಲಹೆಗಾರಾಗಿ ಅನಸ್ ತಂಙಳ್ ಗಂಡಿಬಾಗಿಲು, ಇಬ್ರಾಹೀಂ ಬಾತಿಷ್ ತಂಙಳ್ ಕಿನ್ಯ ಆಯ್ಕೆಯಾದರು.