×
Ad

ಮೂಡುಬಿದಿರೆ: ಕರ್ನಾಟಕ ಪುರುಷರ, ಮಹಿಳೆಯರ ತಂಡ ಸೆಮಿಫೈನಲ್‌ಗೆ ಆಯ್ಕೆ

Update: 2017-02-21 19:55 IST

ಮೂಡುಬಿದಿರೆ, ಫೆ.21: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ 62ನೇ ಸೀನಿಯರ್ ಬಾಲ್ ಬ್ಯಾಡ್ಮಿಂಟನ್‌ನ ಮೂರನೇ ದಿನ ಕರ್ನಾಟಕ ಮಹಿಳಾ ಹಾಗೂ ಪುರುಷರ ತಂಡಗಳು ಸೆಮಿ ಫೈನಲ್‌ಗೆ ಆಯ್ಕೆಯಾಗಿದೆ.

ಕರ್ನಾಟಕದ ಜೊತೆಗೆ ಪುರುಷರ ವಿಭಾಗದಲ್ಲಿ ಇಂಡಿಯನ್ ರೈಲ್ವೇಸ್, ತೆಲಂಗಾಣ, ತಮಿಳುನಾಡು ಸೆಮಿಫೈನಲ್ ಹಂತ ತಲುಪಿದರೆ, ಮಹಿಳೆಯರ ವಿಭಾಗದಲ್ಲಿ ತಮಿಳುನಾಡು, ಛತೀಸ್‌ಗಢ್, ಆಂದ್ರ ಪ್ರದೇಶ ಸೆಮಿಫೈನಲ್‌ಗೆ ತಲುಪಿವೆ.

 ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ಮಹಿಳೆಯರ ತಂಡವು ಬಿಹಾರ ತಂಡವನ್ನು 35-14,35-14 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ತಲುಪಿದೆ. ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡವು ಮುಂಬೈ ತಂಡವನ್ನು 35-29,31-35,35-26 ಅಂಕಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಆಯ್ಕೆಯಾಗಿದೆ. 2012 ನಂತರ ಕರ್ನಾಟಕ ಪುರುಷರ ತಂಡ ಇದೇ ಮೊದಲ ಬಾರಿಗೆ ಸಮಿಫೈನಲ್‌ಗೆ ಆಯ್ಕೆಯಾಗಿರುವುದು ಹೆಗ್ಗಳಿಕೆ ಪಾತ್ರವಾಗಿದೆ.

ಬುಧವಾರ ಮುಂಜಾನೆ ನಡೆಯಲಿರುವ ಪುರುಷರ ಸೆಮಿಫೈನಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಇಂಡಿಯನ್ ರೈಲ್ವೇಸ್ ತಂಡವು ಅತಿಥೇಯ ಕರ್ನಾಟಕ ತಂಡದ ವಿರುದ್ಧ ಹಾಗೂ ತೆಲಂಗಾಣ ತಂಡವು ತಮಿಳುನಾಡು ವಿರುದ್ಧ ಸೆಣಸಲಿದೆ.

ಮಹಿಳೆಯ ವಿಭಾಗದಲ್ಲಿ ಹಾಲಿ ಚಾಂಪಿಯನ್ ಅತಿಥೇಯ ಕರ್ನಾಟಕ ತಂಡವು ಆಂದ್ರ ಪ್ರದೇಶ ವಿರುದ್ಧ ಹಾಗೂ ತಮಿಳುನಾಡು ತಂಡವು ಛತೀಸ್‌ಗಡ್ ವಿರುದ್ಧ ಸೆಣಸಲಿದೆ. ಅಪರಾಹ್ನ ಪುರುಷರ ಹಾಗೂ ಮಹಿಳೆಯರ ವಿಭಾಗದ ಫೈನಲ್ ಪಂದ್ಯಗಳು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News