ಮೂಡುಬಿದಿರೆ: ಅತ್ಯಾಚಾರ ಯತ್ನ ಆರೋಪಿಗೆ ಜಾಮೀನು
Update: 2017-02-21 20:01 IST
ಮೂಡುಬಿದಿರೆ, ಫೆ.21: ಸೋಮವಾರ ಇಲ್ಲಿನ ಗುಡ್ಡೆಯಂಗಡಿಯಲ್ಲಿ ಅತ್ಯಾಚಾರ ಯತ್ನ ದೂರಿನ ಆರೋಪಿ ಸುಧೀರ್‌ಗೆ ಮಂಗಳವಾರ ಮೂಡುಬಿದಿರೆ ನ್ಯಾಯಾಲಯವು ಜಾಮೀನು ನೀಡಿದೆ.
ಮಂಗಳವಾರ ಬೆಳಗ್ಗೆ ನ್ಯಾಯಾಲಯಕ್ಕೆ ಆರೋಪಿಯನ್ನು ಪೊಲೀಸರು ಹಾಜರುಪಡಿಸಿದ ಸಂದರ್ಭ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ನಂತರ ಆರೋಪಿ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲವು ಆತನಿಗೆ ಜಾಮೀನು ನೀಡಿದೆ.
ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಸಂಶಯಗಳೆದ್ದಿದ್ದು, ದಲಿತ ಯುವಕನ ಮೇಲಿನ ಹಲ್ಲೆಯು ಸಾಕಷ್ಟು ಚರ್ಚೆಗೊಳಗಾಗುತ್ತಿದೆ.