ಉಡುಪಿ: ಸಂಸ್ಕೃತ ಸಂಭಾಷಣ ಶಿಬಿರ
ಉಡುಪಿ, ಫೆ.21: ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯಲ್ಲಿ ಜ್ಞಾನವನ್ನು ಪಡೆಯುವುದು ಕಷ್ಟಸಾಧ್ಯವಾದರೂ, ಆ ಭಾಷೆಯಲ್ಲಿ ವ್ಯವಹಾರವನ್ನು ಸರಳವಾಗಿ ಮಾಡಬಹುದು. ಬಹುತೇಕ ಎಲ್ಲಾ ಭಾರತೀಯ ಭಾಷೆಗಳ ಶಬ್ದಗಳೂ ಮೂಲತಃ ಸಂಸ್ಕೃತದ್ದೇ ಆಗಿವೆ ಎಂದು ಉಡುಪಿ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ಮಧುಸೂದನ ಭಟ್ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ 10 ದಿನಗಳ ಸಂಸ್ಕೃತ ಸಂಭಾಷಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್, ಶಿಬಿರದ ಶಿಕ್ಷಕಿ, ಸಂಸ್ಕೃತ ಕಾಲೇಜಿನ ವಿಭಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ಸುಕನ್ಯಾ ಮೇರಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಉಪನ್ಯಾ ಸಕ ಡಾ.ರಾಮಕೃಷ್ಣ ಉಡುಪ ಸ್ವಾಗತಿಸಿದರು. ಪವಿತ್ರ ಹೆಗಡೆ ವಂದಿಸಿದರು. ವಿದ್ಯಾರ್ಥಿ ಮೃತ್ಯುಂಜಯ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ:
ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮಿಜಿ ಆಶೀವರ್ಚನ ನೀಡಿ, ಯಾವುದೇ ಶಾಸ್ತ್ರ, ವಿಜ್ಞಾನಗಳು ಏನೆನ್ನೆಲ್ಲಾ ಕೊಟ್ಟರೂ ಅವುಗಳಿಗೆ ಭಾಷೆಯ ಸಂಸ್ಕಾರವಿಲ್ಲದಿದ್ದರೇ ಅವುಗಳನ್ನು ತಿಳಿದವರೂ ಸಂಸ್ಕಾರಹೀನರಾಗುತ್ತಾರೆ ಎನ್ನುವುದಕ್ಕೆ ಈಗಿನ ಶಿಕ್ಷಣ ಪದ್ಧತಿಯ ಕೆಲವು ಉದಾಹರಣೆಗಳೇ ಸಾಕ್ಷಿ ಎಂದರು.