×
Ad

ಕೊನೆಗೂ ಅಸ್ಸಾಮಿಗೆ ದಕ್ಕಿದ ತೈಲ ರಾಯಲ್ಟಿ

Update: 2017-02-21 21:29 IST

ಹೊಸದಿಲ್ಲಿ,ಫೆ.21: ಎಂಟು ವರ್ಷಗಳ ಸುದೀರ್ಘ ಕಾನೂನು ಸಮರದ ಬಳಿಕ ಅಸ್ಸಾಂ ಸರಕಾರಕ್ಕೆ ಕಚ್ಚಾ ತೈಲ ರಾಯಧನವಾಗಿ 6,320 ಕೋ.ರೂ.ಗಳನ್ನು ನೀಡುವುದಾಗಿ ಬುಧವಾರ ಒಪ್ಪಿಕೊಳ್ಳುವ ಮೂಲಕ ಕೇಂದ್ರವು ನ್ಯಾಯಾಲಯದ ಹೊರಗೆ ವಿವಾದವನ್ನು ಬಗೆಹರಿಸಿಕೊಂಡಿದೆ. 2016-17ನೇ ಸಾಲಿನಿಂದ ಮೂರು ಹಣಕಾಸು ವರ್ಷಗಳಲ್ಲಿ ಈ ಮೊತ್ತವನ್ನು ಕೇಂದ್ರವು ಅಸ್ಸಾಂ ಸರಕಾರಕ್ಕೆ ಪಾವತಿಸಲಿದೆ.

ಅಸ್ಸಾಮಿನಲ್ಲಿ ಪ್ರತಿವರ್ಷ ಆಯಿಲ್ ಇಂಡಿಯಾ ಲಿ.3.2 ಮಿ.ಟನ್ ಮತ್ತು ಒಎನ್‌ಜಿಸಿ 1.1 ಮಿ.ಟನ್ ಕಚ್ಚಾ ತೈಲವನ್ನು ಉತ್ಪಾದಿಸುತ್ತಿವೆ.

 2008ರಲ್ಲಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಗಳೇ ಇದ್ದಾಗಿನಿಂದಲೂ ಉಭಯ ಸರಕಾರಗಳು ರಾಯಧನ ವಿಷಯದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದವು. ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಒಂಭತ್ತೇ ತಿಂಗಳಲ್ಲಿ ನಾವು ವಿವಾದವನ್ನು ಬಗೆಹರಿಸಿಕೊಂಡಿದ್ದೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News