×
Ad

ಕಾಸರಗೋಡು: ಖಾಸಗಿ ಬಸ್ ಉರುಳಿ ಬಿದ್ದು ಹತ್ತಕ್ಕೂ ಅಧಿಕ ಜನರಿಗೆ ಗಾಯ

Update: 2017-02-21 22:03 IST

ಕಾಸರಗೋಡು, ಫೆ. 21: ಖಾಸಗಿ ಬಸ್  ಉರುಳಿ ಬಿದ್ದು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡ  ಘಟನೆ  ರಾಜಪುರ ಸಮೀಪದ 
ರಾಣಿಪುರದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮಂಗಳವಾರ ರಾಣಿಪುರದಲ್ಲಿರುವ ಪ್ರವಾಸಿ ಕೇಂದ್ರಕ್ಕೆ ತೆರಳಿ ಮರಳುತ್ತಿದ್ದಾಗ  ಚಾಲಕನ ನಿಯಂತ್ರಣ ತಪ್ಪಿದ ಬಸ್ಸು 30 ಅಡಿಯಷ್ಟು ಆಳಕ್ಕೆ ಉರುಳಿ  ಬಿದ್ದು , ಈ ದುರ್ಘಟನೆ ನಡೆದಿದೆ.

ವೆಳ್ಳಿಕೋತ್ ನಲ್ಲಿರುವ  ಸ್ವ ಉದ್ಯೋಗ  ತರಬೇತಿ ಕೇಂದ್ರದ ತರಬೇತು ದಾರರನ್ನು  ಕರೆದೊಯ್ಯುತ್ತಿದ್ದ  ಟೂರಿಸ್ಟ್ ಬಸ್ಸು  ಚಾಲಕನ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ.

ಬಸ್ಸು ಪ್ರಯಾಣಿಕರಾದ ಸಜಿತ ( 30) ರಮ್ಯ ( 24) , ರಾಖಿ ( 22) ಶೈಲಜಾ ( 27), ಗೀತಾ ಮಧು ( 36) ಅನಿಷಾ ( 22) ಅನಿತಾ ( 36), ಸರಿತಾ ( 36), ಜ್ಯೋತಿ ( 27), ಶ್ರುತಿ (24) , ಚಾಲಕ ಅಬ್ದುಲ್ ಲತೀಫ್ ( 30) ಗಾಯಗೊಂಡಿದ್ದಾರೆ.

ಈ ಪೈಕಿ   ಗಂಭೀರ ಗಾಯಗೊಂಡ  ಸಜಿತ ( 30) ಇವರನ್ನು ಕಾಞ೦ಗಾಡ್  ಖಾಸಗಿ  ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ  ತಲುಪಿಸಿದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News