×
Ad

ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಕಲಾಯಿ ಯುನಿಟ್ ವತಿಯಿಂದ ಅನುಸ್ಮರಣಾ ಕಾರ್ಯಕ್ರಮ

Update: 2017-02-21 23:02 IST

ಬಂಟ್ವಾಳ, ಫೆ.21: ಎಸ್ಕೆಎಸ್ಸೆಸ್ಸೆಫ್ ಕಲಾಯಿ ಯುನಿಟ್ ಇದರ ಆಶ್ರಯದಲ್ಲಿ ಸಮಸ್ತ ಅಗಲಿದ ನೇತಾರರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಅಮ್ಮುಂಜೆ ಗ್ರಾಮದ ಕಲಾಯಿಯಲ್ಲಿ ನಡೆಯಿತು.

ಈ ಕಾರ್ಯಕ್ರಮದ ಸ್ವಾಗತವನ್ನು ಬಹು ಇರ್ಫಾನ್ ಮೌಲವಿ ಕಲಾಯಿ ನಡೆಸಿದರು. ಹಿದಾಯತ್ತುಲ್ ಇಸ್ಲಾಮ್ ಮದರಸ ವಿದ್ಯಾರ್ಥಿ ಇಬ್ರಾಹೀಮ್ ಖಲೀಲ್ ರವರು ಖಿರಾಹತ್ ಪಠಿಸಿದರು. ಉದ್ಘಾಟನಾ ಕಾರ್ಯಕ್ರಮವನ್ನು ಅಹಮದ್ ದಾರಿಮಿ ಕಂಬಳಕೋಡಿ ಖತೀಬರು ಕಲಾಯಿ ಇವರು ನಡೆಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಹು.ಇಸಾಕ್ ಫೈಝಿಯವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಂ.ಎಸ್. ಅಬ್ದುಲ್ ರಹಿಮಾನ್ ಕಲಾಯಿ ವಹಿಸಿದ್ದರು ,ಅದೇ ರೀತಿ ಸಮಸ್ತದ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಿತ್ತಬೈಲು ಜಬ್ಬಾರ್ ಉಸ್ತಾದ್,  ಬಂಟ್ವಾಳ ಮೆಸ್ಕಾಮ್ ಇದರ ಸದಸ್ಯರಾಗಿ ಆಯ್ಕೆಯಾದ ಅಬ್ದುಲ್ ಹಕೀಮ್.  ಎಂ.ಟಿ. ಇವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ವೇದಿಕೆಯು ಮರ್ಹೂಮ್ ಕೋಟುಮಲ ಬಾಪುಸ್ತಾದರ ಹೆಸರಿನಲ್ಲಿ ಸಿಧ್ದಗೊಂಡಿತ್ತು. ಶೈಖುನಾ ತ್ವಾಖ ಉಸ್ತಾದ್ ರವರು ದುವಾ ಆಶೀರ್ವಚನ ಗೈದರು. ಝುಬೈರ್ ದಾರಿಮಿ ಪೈಕಮ್ ಇವರು ಅನುಸ್ಮರಣಾ ಪ್ರಭಾಷಣ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News