×
Ad

ಉಡುಪಿ ಜಿಲ್ಲಾಧಿಕಾರಿಗೆ ವರ್ಗಾವಣೆ: ಪ್ರಿಯಾಂಕಾ ನೂತನ ಜಿಲ್ಲಾಧಿಕಾರಿ

Update: 2017-02-21 23:58 IST

ಉಡುಪಿ, ಫೆ.21: ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ವರ್ಗಾವಣೆಗೊಂ ಡಿದ್ದಾರೆ. ಇದೇ ವೇಳೆ ಈಗ ಉಡುಪಿಯ ಜಿಪಂ ಸಿಇಒ ಕಾರ್ಯನಿರ್ವಹಿಸುತ್ತಿರುವ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಜಿಲ್ಲಾಧಿಕಾರಿಯಾಗಿ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.

ಟಿ.ವೆಂಕಟೇಶ್‌ರನ್ನು ಮೈ ಶುಗರ್ ಕಂಪೆನಿಯ ಆಡಳಿತ ನಿರ್ದೇಶಕರಾಗಿ ನೇಮಿಸಲಾಗಿದೆ. ಅವರು ಕಳೆದ ವರ್ಷದ ಜು.29ರಂದು ಡಾ.ವಿಶಾಲ್ ಸ್ಥಾನಕ್ಕೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಐಎಎಸ್ ಅಧಿಕಾರಿಯಾಗಿರುವ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ 2015ರ ನ.10ರಂದು ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕೇರಳ ಮೂಲದ ಇಂಜಿನಿಯರಿಂಗ್ ಪದವೀಧರೆಯಾಗಿರುವ ಪ್ರಿಯಾಂಕಾ 2009ರ ಬ್ಯಾಚ್‌ನ ಐಎಎಸ್ ಅಧಿಕಾರಿ ಯಾಗಿದ್ದು, ಬೆಳಗಾವಿಯ ಉಪವಿಭಾಗಾಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ಉಡುಪಿಗೆ ಆಗಮಿಸುವ ಮುನ್ನ ಚಿಕ್ಕಮಗಳೂರು ಜಿಪಂನ ಸಿಇಒ ಆಗಿ ಅವರು ಕಾರ್ಯನಿರ್ವಹಿಸಿದ್ದರು.

ಅಕ್ರಮ ಮರಳುಗಾರಿಕೆ ತಡೆದದ್ದೇ ತನ್ನ ವರ್ಗಾವಣೆಗೆ ಕಾರಣ: ವೆಂಕಟೇಶ್
‘‘ಉಡುಪಿ ಜಿಲ್ಲೆಯಲ್ಲಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದೇ ತನ್ನ ಅಕಾಲಿಕ ವರ್ಗಾವಣೆಗೆ ಕಾರಣ’’ ಎಂದು ನಿರ್ಗಮನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ.

ಅಕ್ರಮ ಮರಳುಗಾರಿಕೆ ಹಾಗೂ ಮರಳು ಸಾಗಾಟಕ್ಕೆ ತಾನು ಕಡಿವಾಣ ಹಾಕಿದ್ದೆ. ಇದರಿಂದ ತೊಂದರೆಗೊಳಗಾದವರು ಲಾಬಿ ನಡೆಸಿ ಕೇವಲ ಏಳೇ ತಿಂಗಳಲ್ಲಿ ತನ್ನ ವರ್ಗಾವಣೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News