‘ಆ್ಯಂಟನಿ ವೇಸ್ಟ್ ಕಂಪೆನಿ’ ವಿರುದ್ಧ ಸಿಡಿದೆದ್ದ ಮನಪಾ ಕಸ ಸಂಗ್ರಹ ಕಾರ್ಮಿಕರು
Update: 2017-02-22 11:58 IST
ಮಂಗಳೂರು, ಫೆ.22: ಸರಿಯಾಗಿ ವೇತನ ಸಿಗದಿರುವುದರಿಂದ ಬೇಸತ್ತ ಮನಪಾ ಕಸ ಸಂಗ್ರಹ ಕಾರ್ಮಿಕರು ಮನೆಮನೆ ಕಸ ಸಂಗ್ರಹವನ್ನು ಸ್ಥಗಿತಗೊಳಿಸಿ ನಗರದ ಬಂಟ್ಸ್ ಹಾಸ್ಟೆಲ್ ಬಳಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.
ನಗರದ ತ್ಯಾಜ್ಯ ವಿಲೇವಾರಿ ಉಸ್ತುವಾರಿ ವಹಿಸಿಕೊಂಡಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ವೇತನ ಸಮಸ್ಯೆ ಬಗೆಹರಿಸುವವರೆಗೆ ಕಸ ಸಂಗ್ರಹಿಸದಿರಲು ನಿರ್ಧರಿಸಿದ್ದಾರೆ. ಅಲ್ಲದೆ ಕೂಡಲೇ ವೇತನ ಪಾವತಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.