×
Ad

ಕಣ್ಣೂರು ವಿವಿ ಕಲೋತ್ಸವ: ಯಕ್ಷಗಾನದಲ್ಲಿ ಕಾಸರಗೋಡು ಸರಕಾರಿ ಕಾಲೇಜು ಪ್ರಥಮ

Update: 2017-02-22 12:15 IST

ಕಾಸರಗೋಡು, ಫೆ.22: ಕಣ್ಣೂರು ವಿಶ್ವವಿದ್ಯಾನಿಲಯ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ‘ವೀರತರಣಿ ಸೇನ’ ಯಕ್ಷಗಾನ ಪ್ರಸಂಗ ಪ್ರಥಮ ಸ್ಥಾನ ಗಳಿಸಿದೆ. ಪೊವ್ವಲ್ ಲಾಲ್ ಬಹದ್ದೂರು ಶಾಸೀ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಣ್ಣೂರು ವಿವಿ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಈ ವರ್ಷವೂ ಕಾಸರಗೋಡು ಸರಕಾರಿ ಕಾಲೇಜು ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ. ಪೆರ್ಲ ನಲಂದಾ ಕಾಲೇಜಿಗೆ ದ್ವಿತೀಯ ಹಾಗೂ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿಗೆ ತೃತೀಯ ಸ್ಥಾನ ಲಭಿಸಿದೆ. ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿ ತಂಡ ವೀರತರಣಿ ಸೇನ ಎಂಬ ಕಥಾಭಾಗವನ್ನು ಪ್ರದರ್ಶಿಸಿದ್ದು, ವಿದ್ಯಾರ್ಥಿಗಳಾದ ಶಿವರಾಜ್(ಶ್ರೀರಾಮ), ರಮ್ಯಾ(ಲಕ್ಷ್ಮಣ), ಶಶಿರಾಜ್(ಹನುಮಂತ), ಸುಜಾತಾ ಸಿ.ಎಚ್.(ವಿಭೀಷಣ), ನಿವೇದಿತಾ(ಸರಮೆ), ಶ್ರೀಹರಿ (ತರಣಿಸೇನ) ವಿನಾಯಕ(ಸುಪಾರ್ಶ್ವ), ನಿತಿನ್ (ರಾವಣ), ಸುಜಾತಾ ಎನ್.(ರಾಕ್ಷಸ ದೂತ) ಭಾಗವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ದಿವಾಣ ಶಿವಶಂಕರ ಭಟ್ ಯಕ್ಷಗಾನ ತಂಡಕ್ಕೆ ತರಬೇತು ನೀಡಿದ್ದರು. ಡಾ.ರತ್ನಾಕರ ಮಲ್ಲಮೂಲೆ ತಂಡದ ನೇತೃತ್ವ ವಹಿಸಿದ್ದರು. ಮೇಳದಲ್ಲಿ ಭಾಗವತರಾಗಿ ಸತೀಶ್ ಪುಣಿಂಚಿತ್ತಾಯ, ಚೆಂಡೆಯಲ್ಲಿ ಶ್ರೀಧರ ಎಡಮಲೆ, ಮದ್ದಳೆಯಲ್ಲಿ ಗಿರೀಶ ಮುಳ್ಳೇರಿಯ, ಚಕ್ರತಾಳದಲ್ಲಿ ಮುರಳಿ ವಿಟ್ಲ ಸಹಕರಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಮನೋಮೃಗ ನಾಟಕ ತೃತೀಯ ಸ್ಥಾನ ಪಡೆದುಕೊಂಡಿದ್ದು, ಮುನ್ನಾಡ್ ಪೀಪಲ್ಸ್ ಮತ್ತು ಗುರುದೇವ್ ಕಾಲೇಜು ತಂಡ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಹಂಚಿಕೊಂಡಿದೆ. ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕವನ್ನು ಸದಾಶಿವ ಪೊಯ್ಯೆ ನಿರ್ದೇಶಿಸಿದ್ದರು. ಸುಜಾತಾ ಎಸ್. ನೇತೃತ್ವ ವಹಿಸಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News