ವಾದಿತ್ವೈಬ ಕ್ಯಾಂಪಸ್‌ಗೆ ಎಸ್‌ಯುಐಸಿ ಕತರ್ ಸಮಿತಿ ನಾಯಕರು ಭೇಟಿ
ಮಂಗಳೂರು, ಫೆ.22: ಕಿನ್ಯದಲ್ಲಿರುವ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ವಾದಿತ್ವೈಬ ಕ್ಯಾಂಪಸ್‌ಗೆ ಮುಡಿಪುವಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್(ಎಸ್‌ಯುಐಸಿ) ಕತರ್ ಸಮಿತಿ ಇತ್ತೀಚೆಗೆ ಭೇಟಿ ನೀಡಿತ್ತು.
ವಾದಿತ್ವೈಬದ ವತಿಯಿಂದ ನೂತನವಾಗಿ ನಿರ್ಮಿಸುತ್ತಿರುವ ಕಾಲೇಜು ಕಟ್ಟಡದ ಬಗ್ಗೆ ಚರ್ಚಿಸಿದ ಸಮಿತಿಯು ಮುಂದಿನ ಎಲ್ಲ ಯೋಜನೆಗಳಿಗೆ ಸಹಕಾರ ನೀಡುವುದಾಗಿ ಕತರ್‌ಸಮಿತಿಯ ನಾಯಕ ಅಬ್ದುರ್ರಝಾಕ್ ಸಾಂಬಾರುತೋಟ ಭರವಸೆ ನೀಡಿದರು.
ಈ ಸಂದರ್ಭ ದಾರುಸ್ಸಲಾಂ ಯೂತ್ ವಿಂಗ್ ಪ್ರ. ಕಾರ್ಯದರ್ಶಿ ನೌಶಾದ್ ಮಲಾರ್ ಸೈಯದ್ ಅಮೀರ್ ತಂಙಳ್ ಕಿನ್ಯ, ಉಸ್ತಾದ್ ಖಾಸಿಂ ದಾರಿಮಿ ಕಿನ್ಯ, ಸಿರಾಜ್ ಹಾಜಿ ಅಲಂಕಾರು, ಅಬೂಸಾಲಿ ಹಾಜಿ ಕುರಿಯಾಕ್ಕರ್, ಇಸ್ಹಾಕ್ ಹಾಜಿ ನಾಟೆಕಲ್, ಜಮಾಲ್‌ಮಂಗಳ ನಗರ, ಸುಲೈಮಾನ್ ಫೈಝಿ ಕುಶಾಲನಗರ, ಬಶೀರ್ ಮಾಸ್ಟರ್ ಮೆಲ್ಕಾರ್, ರಿಯಾಝ್ ಮಾಸ್ಟರ್ ವೇಣೂರು, ಅರ್ಷದ್ ಕಿನ್ಯ, ಅಝೀಮ್ ನಾಟೆಕಲ್, ಶರೀಫ್ ಕಲ್ಕಟ್ಟ, ತಂಝೀಲ್ ಉಕ್ಕುಡ ಹಾಗೂ ಕತರ್ ಸಮಿತಿಯ ನಾಯಕರು ಉಪಸ್ಥಿತರಿದ್ದರು.