×
Ad

ಕ್ಯಾಲಿಕಟ್ ಮಿಠಾಯಿ ಬೀದಿಯಲ್ಲಿ ಬೆಂಕಿ ಆಕಸ್ಮಿಕ: ಕೋಟ್ಯಂತರ ರೂ. ನಷ್ಟ

Update: 2017-02-22 15:30 IST

ಕ್ಯಾಲಿಕಟ್. ಫೆ. 22: ನಗರದ ವ್ಯಾಪಾರಿ ಕೇಂದ್ರವಾದ ಮಿಠಾಯಿ ಬೀದಿಯಲ್ಲಿ ಭಾರೀ ಅಗ್ನಿ ಆಕಸ್ಮಿಕ ನಡೆದಿದೆ. ರಾಧಾ ಥಿಯೇಟರ್ ಸಮೀಪದ ಮಾಡರ್ನ್ ಹಾಂಡ್‌ಲೂಂ ಆಂಡ್ ಟೆಕ್ಸ್‌ಟೈಲ್ಸ್ ಎನ್ನುವ ಬಟ್ಟೆ ಅಂಗಡಿಗೆ ಮೊದಲು ಬೆಂಕಿ ಹಿಡಿದಿತ್ತು. ಈ ಮೂರು ಮಹಡಿಯ ಈ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಬೆಂಕಿ ಹತ್ತಿರದ 15 ಅಂಗಡಿಗಳಿಗೆ ವ್ಯಾಪಿಸಿದೆ ಎಂದು ವರದಿಯಾಗಿದೆ. ಊರವರು ಮತ್ತು ಅಗ್ನಿಶಾಮಕ ದಳ ಸೇರಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಅಗ್ನಿಶಾಮಕ ದಳದ ಆರು ಯುನಿಟ್ ಬೆಂಕಿ ಆರಿಸುವ ಕೆಲಸದಲ್ಲಿ ಮಗ್ನವಾಗಿವೆ.

ಬೆಳಗ್ಗೆ 11:30ಕ್ಕೆ ಬೆಂಕಿ ಕಂಡು ಬಂದಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಗಡಕ್ಕೆ ಕಾರಣವೆಂದು ಪ್ರಾಥಮಿಕ ಅಂದಾಜು. ಹಗಲು ವೇಳೆ ಆದ್ದರಿಂದ ರಸ್ತೆ ಜನದಟ್ಟಣೆಯಿಂದ ಕೂಡಿತ್ತು. ಅಂಗಡಿಯಲ್ಲಿಯೂ ಜನರಿದ್ದರು. ಬೆಂಕಿ ಹಿಡಿದದ್ದು ಗಮನಕ್ಕೆ ಬಂದ ಕೂಡಲೇ ಜನರನ್ನು ತೆರವುಗೊಳಿಸಲಾಯಿತು. ಯಾರೂ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. ಜಿಲ್ಲೆಯ ವಿವಿಧ ಕಡೆಗಳಿಂದ ಅಗ್ನಿಶಾಮಕ ದಳ ಘಟಕಗಳು ಘಟನಾ ಸ್ಥಳಕ್ಕೆ ಬಂದಿವೆ.

ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಪೊಲೀಸ್, ಅಗ್ನಿಶಾಮಕ ದಳ ಅಧಿಕಾರಿಗಳು ಹಾಗೂ ಊರವರು ರಕ್ಷಣಾಕಾರ್ಯದಲ್ಲಿ ನಿರತರಾಗಿದ್ದಾರೆ. ಕಿರಿದಾದ ದಾರಿಯಾದ್ದರಿಂದ ಬೆಂಕಿ ಆರಿಸುವ ಕೆಲಸ ಸ್ವಲ್ಪಮಟ್ಟಿಗೆ ಕಷ್ಟಕರವಾಗಿ ಪರಿಣಮಿಸಿದೆ. ಕಲ್ಲಿಕೋಟೆ ಸಂಸದ ಎಂಕೆ ರಾಘವನ್ ಸ್ಥಳದಲ್ಲಿದ್ದಾರೆ.

 ಗುಜರಾತ್‌ನ ಪಂಕಜ್ ಬಲಾನಿ ಎನ್ನುವವರ ಮಾಲಕತ್ವದ ಮಾಡರ್ನ್‌ಹ್ಯಾಂಡಲೂಂ ಅಂಗಡಿ ಕಳೆದ 53ವರ್ಷಗಳಿಂದ ಇಲ್ಲಿದೆ. ಕೋಟ್ಯಂತರ ರೂಪಾಯಿಯ ಬಟ್ಟೆಬರೆಗಳು ಅಗ್ನಿಗಾಹುತಿಯಾಗಿದೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News