×
Ad

ಮಂಗಳೂರು: ಫೆ.24: ಸಹ್ಯಾದ್ರಿ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ

Update: 2017-02-22 17:46 IST

ಮಂಗಳೂರು,ಫೆ. 22: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪೀಪಲ್ ಮ್ಯಾನೇಜ್‌ಮೆಂಟ್(ಎನ್‌ಐಪಿಎಂ) ಹಾಗೂ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ 'ಲಿವರೇಜಿಂಗ್ ಬ್ಯುಸಿನೆಸ್ ಸ್ಕಿಲ್ಸ್ ಇನ್ ಲೈನ್ ವಿದ್ ಕರೆಂಟ್ ಎಚ್‌ಆರ್ ಟ್ರೆಂಡ್ಸ್ ಆ್ಯಂಡ್ ಎಂಪ್ಲಾಯಿ ಲ್ಹಾಸ್‌' ಎಂಬ ವಿಷಯದ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣವು ಫೆ. 24ರಂದು ಬೆಳಗ್ಗೆ 9.10ಕ್ಕೆ ಸಹ್ಯಾದ್ರಿ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್‌ಐಪಿಎಂ ಅಧ್ಯಕ್ಷ ಸುರೇಶ್ , ಕಾರ್ಯಾಗಾರವನ್ನು ಎಂಸಿಎ್ ನಿರ್ದೇಶಕ ಕೆ.ಪ್ರಭಾಕರ್ ರಾವ್ ಉದ್ಘಾಟಿಸಲಿದ್ದು, ಮುಖ್ಯಅತಿಥಿಗಳಾಗಿ ಕಾರ್ಡೊಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್‌ನ ಆಡಳಿತ ಪಾಲುದಾರ ಶೈಲೇಂದ್ರ ಭಟ್ಕಂಡೆ, ಭಂಡಾರಿಫೌಂಡೇಶನ್‌ನ ಅಧ್ಯಕ್ಷ ಮಂಜುನಾಥ ಭಂಡಾರಿ ಭಾಗವಹಿಸಲಿದ್ದಾರೆ. ಬಿಎಎಸ್‌ಎ್ನ ನಿರ್ದೇಶಕ ಡಾ. ಲಕ್ಷ್ಮೆ ನಡ್ಕರ್ನಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಸಂಜೆ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ನಿಟ್ಟೆ ವಿವಿಯ ರಿಜಿಸ್ಟ್ರಾರ್ ಡಾ. ಎಂ.ಎಸ್.ಮೂಡಿತ್ತಾಯ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಉಮೇಶ್ ಎಂ.ಭೂಷಿ ಭಾಗವಹಿಸಲಿದ್ದಾರೆ.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಚಾರ್ಲ್ಸ್ ಕರ್ವಾಲೊ, ಎನ್.ಪ್ರಸಾದ್ ಮೆನನ್, ನಿವೇದಿತಾ ಮಿರ್ಜಾಕರ್, ಸಿ.ಎಂ.ನಟರಾಜ್, ಪಿ.ಜೆ.ರೈ, ಹರಿಪ್ರಸಾದ್, ಸುರೇಂದ್ರನಾಥ್ ಭಾಗವಹಿಸಲಿದ್ದಾರೆ.

ಕಾರ್ಯಾಗಾರದಲ್ಲಿ 102 ವಿದ್ಯಾರ್ಥಿಗಳು ಹಾಗೂ 50 ಮಂದಿ ವಿವಿಧ ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹ್ಯಾದ್ರಿ ಕಾಲೇಜಿನ ಎಂಬಿಎ ನಿರ್ದೇಶಕಿ ಡಾ. ವಿಶಾಲ್ ಸಮರ್ಥ, ಎನ್‌ಐಪಿಎಂ ಮಾಜಿ ಅಧ್ಯಕ್ಷ ಡಾ. ದೇವರಾಜ್ ಕೆ, ಶೇಖರ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News